ಸಮಗ್ರ ಕೃಷಿ ಪದ್ಧತಿನ್ವಯ ಉದ್ದು, ಹೆಸರು, ತೋಗರಿ ಹಾಗೂ ಹೈ.ಜೊಳ ಅನುಸರಿಸಲು ರೈತಬಾಂಧವರಲ್ಲಿ ಮನವಿ

ಬೀದರ ಜೂನ್ 17 (ಕರ್ನಾಟಕ ವಾರ್ತೆ):- ಔರಾದ ತಾಲ್ಲೂಕಿನ ಬೇಡಿಕೆ ಅನ್ವಯ ಮೇಲಾಧಿಕಾರಿಗಳು ಬೇಡಿಕೆ ನೀಡಿದ ವಿವಿಧ ಸಂಸ್ಥೆಗಳು ಪ್ರಮಾಣಿಕೃತ ಸೊಯಾಬಿನ್ ಬಿತ್ತನೆ ಬೀಜ ಲಭ್ಯವಿರುವ ಕಾರಣ ಸರಬರಾಜು ಮಾಡಿರುವದಿಲ್ಲ ಒಟ್ಟಾರೆ ತಾಲ್ಲೂಕಿನ ಬೇಡಿಕೆ ಅನ್ವಯ 6064 ಬಿತ್ತನೆ ಬೀಜ ಸರಬರಾಜು ಆಗಿರುವದಿಲ್ಲ. ಹಾಗಾಗಿ ತಾಲ್ಲೂಕಿನ ಕೇಲವೊಂದು ಹಳ್ಳಿಗಳಲ್ಲಿ ಬಿತ್ತನೆ ಬೀಜ ವಿತರಿಸಿರುವದಿಲ್ಲ, ಪ್ರಮಾಣಿಕೃತ ಸೊಯಾಬಿನ್ ಬಿತ್ತನೆ ಬೀಜ ಲಭ್ಯವಿರುವದಿಲ್ಲ ಹಾಗೂ ಸೊಯಾಬಿನ್ ನೀಜ ಚೀಟಿ ಬೀಜ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿರುತ್ತದೆ ಎಂದು ಮೇಲಾಧಿಕಾರಿಗಳು ಮಾಹಿತಿ ನೀಡಿರುತ್ತಾರೆ ಎಂದು ಔರಾದ(ಬಾ) ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
2021-22 ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸೊಯಾಬಿನ್, ತೊಗರಿ, ಉದ್ದು, ಹೆಸರು ಮತ್ತು ಹೈ.ಜೊಳ ವಿತರಿಸಲಾಗುತ್ತ್ತಿದೆ. ತಾಲ್ಲೂಕಿನಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಬೇಡಿಕೆ ಅನ್ವಯ ಒಟ್ಟು 34200 ಸೊಯಾಬಿನ್ ಬಿತ್ತನೆ ಬೀಜ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ಮೇ ಮೊದಲನೆ ವಾರದಲ್ಲಿ ಸಲ್ಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  
ಆದರೆ ನಮ್ಮ ತಾಲ್ಲೂಕಿಗೆ 30200 ಸೊಯಾಬಿನ್ ಬೀಜ ಸರಬರಾಜು ಮಾಡಲು ವಿವಿಧ ಸಂಸ್ಥೆಗಳಿಗೆ ಬೇಡಿಕೆಯನ್ನು ಮೇಲಾಧಿಕಾರಿಗಳು ಸಲ್ಲಿಸಲಾಗಿದ್ದು, ಜೂನ 10 ರವರೆಗೆ ತಾಲ್ಲೂಕಿನಲ್ಲಿ 28136 ಕ್ವೀಂಟಲ್ ಸೊಯಾಬಿನ್ ಬಿತ್ತನೆ ಬೀಜ ಸರಬರಾಜು ಆಗಿದ್ದು ಜೂನ 03 ರಿಂದ ಜೂನ 10 ರವರೆಗೆ 17000 ಸಾವಿರ ಕ್ವಿಂಟಲ್ ಬೀಜ ವಿತರಣೆಯ ಗತಿ ಗಮನಿಸಿ ಈ ವರ್ಷ ಸೊಯಾಬಿನ ಬಿತ್ತನೆ ಬೀಜ ಬೆಲೆ ಗರಿಷ್ಟವಾಗಿದ್ದು ರೈತರು ಸೊಯಾಬಿನ ಬೆಳೆ  ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ತೋರಿಸುತ್ತಿರುವ ವಿಷಯ ಗಮನಿಸಿ ಮೇಲಾಧಿಕಾರಿಗಳಿಗೆ ಇನ್ನು ಉಳಿದ ಬಿತ್ತನೆ ಬೀಜ ಸರಬರಾಜು ಮಾಡಲು ವಿನಂತಿ ಮಾಡಲಾಗಿತ್ತು.
ಒಟ್ಟಾರೆ ತಾಲ್ಲೂಕಿನಲ್ಲಿ 28136 ಕ್ವಿಂಟಲ ಸೊಯಾಬಿನ ಸರಬರಾಜ ಆಗಿದ್ದು ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮುಖಾಂತರ ವಿತರಿಸಲಾಗಿರುತ್ತದೆ.
ಆದಕಾರಣ ರೈತ ಬಾಂಧವರು ಸಮಗ್ರ ಕೃಷಿ ಪದ್ಧತಿನ್ವಯ ಉದ್ದು, ಹೆಸರು, ತೋಗರಿ  ಹಾಗೂ ಹೈ.ಜೊಳ ಅನುಸರಿಸಿ, ಇನ್ನು ಮುಂದೆ ಸೊಯಾಬಿನ ಬಿತ್ತನೆ ಬೀಜ ಇಲಾಖೆಯಿಂದ ಸರಬರಾಜು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಔರಾದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Latest Indian news

Popular Stories

error: Content is protected !!