ದಾಳಿಂಬೆ ಮತ್ತು ಹಸಿ ಮೆಣಸಿನಕಾಯಿ ಬೆಳೆ ವಿಮೆಗೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): 2021-22 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂವಿನಹಡಗಲಿ ವ್ಯಾಪ್ತಿಯ ದಾಳಿಂಬೆ ಹಾಗೂ ಹಸಿಮೆಣಸಿನಕಾಯಿ ಬೆಳೆಗಳಿಗೆ ವಿಮೆ ನೊಂದಣಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹೂವಿನಹಡಗಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹೆಚ್.ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆದ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತಿರ್ಮಾನಿಸಲಾಗುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆಗೆ ನೊಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂಘೋಷಿತ ದೃಡೀಕರಣ ಪತ್ರ ಒಳಗೊಂಡಂತೆ ಜೂ.30ರೊಳಗಾಗಿ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬಹುದು.
ಹರಪನಹಳ್ಳಿ ವ್ಯಾಪ್ತಿಯಲ್ಲಿ ದಾಳಿಂಬೆ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 1.27 ಲಕ್ಷ ರೂ. ಬೆಳೆ ವಿಮೆ ನೀಡಲಾಗುತ್ತದೆ. ವಿಮಾ ಕಂತಿನ ದರ ಶೇ.5ರಂತೆ 6350 ರೂ.ಗಳನ್ನು ರೈತರು ಪಾವತಿಸಬೇಕು. ಹಸಿ ಮೆಣಸಿನಕಾಯಿ ಬೆಳೆಯುವ ರೈತರು ಪ್ರತಿ ಹೆಕ್ಟೇರ್ಗೆ 71 ಸಾವಿರ ಬೆಳೆ ವಿಮೆ ಪಡೆಯಬಹುದಾಗಿದ್ದು, ವಿಮಾ ಕಂತಿನ ದರ ಶೇ.5ರಂತೆ 3550 ರೂ.ಗಳನ್ನು ರೈತರು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹೂವಿನಹಡಗಲಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ದೂ.ಸಂ:08399-240136, ಹಡಗಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಟಿ.ಸುಧಾಕರ ಮೊ.ಸಂ:8105166176, ತೋಟಗಾರಿಕೆ ಸಹಾಯಕರರಾದ ಹ್ಯಾಟಿ ಮಾರುತಿ ಮೊ.ಸಂ:9886123077, ಇಟ್ಟಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಹರೀಶ ಎಂ.ಆರ್. ಮೊ.ಸಂ:9743674669, ತೋಟಗಾರಿಕೆ ಸಹಾಯಕರಾದ ಡಿ.ರೇವಪ್ಪ ಮೊ.ಸಂ:7353051175, ಹಿರೇಹಡಗಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ವ್ಹಿ.ಎ.ಹುಬ್ಬಳ್ಳಿ ಮೊ.ಸಂ:9945936730, ತೋಟಗಾರಿಕೆ ಸಹಾಯಕರಾದ ಮಹಮ್ಮದ ರಫಿ ಮೊ.ಸಂ:9986722054 ಗೆ ಸಂಪರ್ಕಿಸಬಹುದು.

Latest Indian news

Popular Stories

error: Content is protected !!