ಬೆಳೆ ವಿಮೆ ನೋಂದಣಿಗೆ ಜೂನ.30 ಕೊನೆಯ ದಿನಾಂಕ

ಬೀದರ ಜೂನ್ 10 (ಕರ್ನಾಟಕ ವಾರ್ತೆ):- 2021-22 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು, ಹಸಿ ಮೆಣಸಿನಕಾಯಿ ನೀ ಹಾಗೂ ಶುಂಠಿ ಬೆಳೆಗಳಿಗೆ ವಿಮೆ ನೊಂದಣಿ ಮಾಡಲು ಅವಕಾಶ ಇರುತ್ತದೆ ಎಂದು ಜಿಲ್ಲಾ ಪಂಚಾಯತ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಯೋಜನೆವಾರು ಮತ್ತು ಬೆಳೆವಾರು ವಿವರಗಳನ್ನು ಆನ್‌ಲೈನ್ ಪೋರ್ಟಲ್ ಮೂಲಕ ನೊಂದಾಯಿಸಲು ಎಲ್ಲಾ ಬ್ಯಾಂಕ್‌ನ ಶಾಖೆಗಳಲ್ಲಿ ಸದರಿ ಸೌಲಭ್ಯಗಳ ಒದಗಿಸಲಾಗಿದ್ದು ತಮ್ಮ ಹತ್ತಿರ ಬ್ಯಾಂಕ ಶಾಖೆಗಳಲ್ಲಿ ವಿಮೆ ಮಾಡಿಸಲು ಬೀದರ ಜಿಲ್ಲೆಯ ಎಲ್ಲಾ ರೈತ ಭಾಂದವರಲ್ಲಿ ಕೋರಲಾಗಿದೆ. ವಿಮಾ ನೊಂದಣಿ ಮಾಡಲು ಜೂನ.30 ಕೊನೆಯ ದಿನಾಂಕವಾಗಿರುತ್ತದೆ.
ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ ನೊಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂಘೋಷಿತ ದೃಡೀಕರಣ ಪತ್ರ ಒಳಗೊಂಡAತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬೇಕು. ಹವಾಮಾನ ಅಂಶಗಳಾದ ಮೆಳೆ ಪ್ರಮಾಣ, ಗಾಳಿಯ ವೇಗ, ಆರ್ಧ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮೆಳೆಮಾಪನ ಕೇಂದ್ರಗಳಲ್ಲಿ ದಾಖಲಿಸು ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತಿರ್ಮಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೂಕೋಸು: ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 62000 ರೂ. ಪಾವತಿಸಬೇಕಾದ ವಿಮಾ ಕಂತಿ ದರ ಶೇ.5% 3100 ರೂ.
ಹಸಿ ಮೆಣಸಿನಕಾಯಿ: ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71000 ರೂ. ಪಾವತಿಸಬೇಕಾದ ವಿಮಾ ಕಂತಿ ದರ ಶೇ.5% 3550 ರೂ.
ಶುಠಿ: ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 130000 ರೂ. ಪಾವತಿಸಬೇಕಾದ ವಿಮಾ ಕಂತಿ ದರ ಶೇ.5% 6500 ರೂ.
ಹೆಚ್ಚಿನ ವಿವರಗಳಿಗೆ ಹಾಗೂ ತಮ್ಮ ಗ್ರಾಮ ಪಂಚಾಯತಗೆ ಅನುಮೋದನೆಯಾದ ಬೆಳೆಗಳ ಬಗ್ಗೆ ತಿಳಿಯಲು ತಮಗೆ ಸಂಬAಧಿಸಿದ ತಾಲೂಕಿನ ತೋಟಗಾರಿಕೆ ಕಛೇರಿಗಳಿಗೆ, ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂರ್ಪಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!