ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿ

ಕಲಬುರಗಿ,ಜೂನ್.೨೪.(ಕ.ವಾ)-ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಹಿಳಾ ನಿವಾಸಿಯಾದ ಮೈತ್ರೇಯಿ ಇವರ ವಿವಾಹವು ಕಲಬುರಗಿ ನಗರದ ಬ್ರಹ್ಮಪೂರದ ಗುರುನಾಥ ಸರಾಫ್ ಇವರ ಪುತ್ರರಾದ ಆಶೀಷ್ ಇವರೊಂದಿಗೆ ಶನಿವಾರ (೨೦೨೧ರ ಜೂನ್ ೧೯ರಂದು) ನಡೆಯಿತು. ಈ ಮೂಲಕ ನಿವಾಸಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ ಎಂದು ಕಲಬುರಗಿ ರಾಜ್ಯ ಮಹಿಳಾ ನಿಲಯದ ಪ್ರಭಾರಿ ಅಧೀಕ್ಷಕಿ ಅಂಬಿಕಾ ಓಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಹಿಳಾ ನಿಲಯದ ನಿವಾಸಿಯ ವಿವಾಹವನ್ನು ಸರಳ ಹಾಗೂ ಸಾಂಪ್ರದಾಯಿಕ ಪ್ರಕಾರ ನೆರವೇರಿಸಿ ವಿವಾಹ ನೋಂದಣ ಕಚೇರಿಯಲ್ಲಿ ನೊಂದಾಯಿಸಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಶಿವಶರಣಪ್ಪ, ರಾಜ್ಯ ಮಹಿಳಾ ನಿಲಯದ ಪ್ರಭಾರ ಅಧೀಕ್ಷಕಿ ಅಂಬಿಕಾ ಓಗಿ, ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು ಹಾಗೂ ಮಹಿಳಾ ನಿಲಯದ ನಿವಾಸಿಗಳು ಭಾಗಿಯಾಗಿದ್ದರು.

Latest Indian news

Popular Stories

error: Content is protected !!