ಜುಲೈ ೧ ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಜೂನ್.೩೦.(ಕ.ವಾ.)-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಶರಣನಗರ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಗುರುವಾರ ಜುಲೈ ೧ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಹಾಗೂ ಗಣೇಶ ನಗರ ಫೀಡರ್ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊAದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ಶರಣ ನಗರ ಫೀಡರ್: ಸ್ವಸ್ತಿಕ್ ನಗರ, ಬಸವೇಶ್ವರ ಕಾಲೋನಿ, ಆದರ್ಶ ಕಾಲೋನಿ, ಸಂತ್ರಾಸ್‌ವಾಡಿ, ಎಮ್.ಬಿ.ನಗರ, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಕೆ.ಹೆಚ್.ಬಿ ಲೇಔಟ್, ಎಮ್.ಜಿ ರೋಡ್, ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ, ಯಾದುಲ್ಲಾ ಕಾಲೋನಿ, ಮಹಬೂಬ್ ನಗರ, ಸ್ಟಾಪ್ ಆಂಡ್ ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗಣೇಶ ನಗರ ಫೀಡರ್: ಗಣೇಶ ನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೋನಿ, ಪ್ರಗತಿ ಕಾಲೋನಿ, ನ್ಯೂ ಜಿ.ಡಿ.ಎ. ವೀರೆಂದ್ರ ಪಾಟೀಲ್ ಬಡವಾಣೆ, ಬಾರೆ ಹಿಲ್ಸ್, ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೋನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

Latest Indian news

Popular Stories

error: Content is protected !!