ಶಿಶು ಪಾಲನಾ ಭತ್ಯೆ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಕಲಬುರಗಿ.ಜೂನ್.೩೦.(ಕ.ವಾ)-ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೨೦೨೧-೨೨ನೇ ಸಾಲಿನಲ್ಲಿ ಶಿಶುಪಾಲನಾ ಭತ್ಯೆ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ಭತ್ಯೆ ಎರಡು ಹೆರಿಗೆಗಳವರೆಗೆ ಪ್ರತಿ ಹೆರಿಗೆಯ ನಂತರ ೨ ವರ್ಷಗಳ ಅವಧಿಗೆ ಇರುವ ಈ ಯೋಜನೆಯನ್ನು ೫ ವರ್ಷಗಳ ಅವಧಿಗೆ ವಿಸ್ತರಿಸಿದ್ದು, ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್‌ಖಾನ್ ಅವರು ತಿಳಿಸಿದ್ದಾರೆ.

ಫಲಾನುಭವಿಗಳು ಭಾರತದ ಪ್ರಜೆಯಾಗಿರಬೇಕು. ತಾಯಿ ಮತ್ತು ಮಗುವಿನ ಜಂಟಿ ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರ, ವಿಕಲಚೇತನರ ಗುರುತಿನ ಚೀಟಿ/ಯು.ಡಿ.ಐ.ಡಿ. ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಕನಿಷ್ಠ ೬ ವರ್ಷಗಳು ಕರ್ನಾಟಕದಲ್ಲಿ ವಾಸವಾಗಿರಬೇಕು ಈ ಕುರಿತು ಸಂಬAಧಪಟ್ಟವರಿAದ ವಾಸಸ್ಥಳ ಪ್ರಮಾಣಪತ್ರ ಸಲ್ಲಿಸಬೇಕು. ಅಂಧ ಮಹಿಳೆಯರ ಕನಿಷ್ಠ ವಯಸ್ಸು ೧೮ ವರ್ಷಕ್ಕಿಂತ ಮೇಲ್ಪಟ್ಟರಾಗಿರಬೇಕು. ಶಿಶುಪಾಲನಾ ಭತ್ಯೆಯು ೨ ಹೆರಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. ೨.೫೦ ಲಕ್ಷ ರೂ. ದೊಳಗಿರಬೇಕು. ತಹಶೀಲ್ದಾರರಿಂದ ಪಡೆದ ಅದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಸಹಾಯಕ್ಕಾಗಿ ಬರುವ ವ್ಯಕ್ತಿಯಿಂದ ಶಿಶು ಲಾಲನೆ, ಪಾಲನೆ, ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಒದಗಿಸುವ ಕುರಿತು ಮುಚ್ಚಳಿಕೆ ಸಲ್ಲಿಸಬೇಕು. ಶಿಶು ಪಾಲನಾ ಭತ್ಯೆಯನ್ನು ಮಗುವಿನ ಆರೋಗ್ಯ, ಪೌಷ್ಠಿಕ ಆಹಾರ ಮತ್ತು ಪಾಲನೆ ಮಾತ್ರ ಉಪಯೋಗಿಸಲಾಗುತ್ತದೆ ಎಂದು ದೃಢೀಕರಣ ಸಲ್ಲಿಸಬೇಕು

ಅರ್ಹ ಫಲಾನುಭವಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ೨೦೨೧ರ ಜುಲೈ ೩೦ರ ಸಂಜೆ ೫.೩೦ ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ವಿಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿಯನ್ನು ಮತ್ತು ವಿಕಲಚೇತನರ ಸಹಾಯವಾಣ ದೂರವಾಣ ಸಂಖ್ಯೆ ೦೮೪೭೨-೨೩೫೨೨೨ ಅಥವಾ ಸಂಬAಧಪಟ್ಟ ಅಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿನ ವಿಕಲಚೇತನರ ತಾಲೂಕಾ ನೋಡಲ್ ಅಧಿಕಾರಿಗಳನ್ನು ಇದಲ್ಲದೇ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲೂö್ಯ) ತಾಲೂಕಾ ಪಂಚಾಯತ್ ಕಚೇರಿ ಅಫಜಲಪೂರ-ಮೊಬೈಲ್ ಸಂಖ್ಯೆ ೯೪೪೮೮೦೮೧೪೧, ಆಳಂದ-೯೭೪೧೭೯೨೨೯೧, ಚಿತ್ತಾಪೂರ-೯೮೪೫೨೦೪೩೨೮, ಚಿಂಚೋಳಿ-೯೮೮೦೬೭೧೧೭೧, ಜೇವರ್ಗಿ-೯೭೪೧೮೭೫೮೮೧, ಕಲಬುರಗಿ-೯೯೭೨೦೭೯೭೧೪ ಹಾಗೂ ಸೇಡಂ-೯೯೦೨೪೧೭೯೨೫ ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!