ಮಂಗಳವಾರ ಟೌನ್ ಹಾಲ್ ಮತ್ತು ರಾಮಜಿ ನಗರ ಸಮುದಾಯ ಭವನದಲ್ಲಿ ಕೋವಿಡ್ ಲಸಿಕಾಕರಣ

ಕಲಬುರಗಿ,ಜೂ.೨೧(ಕ.ವಾ) ಕಲಬುರಗಿ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಟೌನ್ ಹಾಲ್ ಮತ್ತು ರಾಮಜೀ ನಗರ ಸಮುದಾಯ ಭವನದಲ್ಲಿ ಇದೇ ಜೂನ್ ೨೨ ರಂದು ಕೋವಿಡ್ ಲಸಿಕಾಕರಣ ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೧೮ ವರ್ಷ ಮೇಲ್ಪಟ್ಟ ಎಲ್ಲಾ ವರ್ಗದ ಸಾರ್ವಜನಿಕರು ಬೆಳಿಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆಯವರೆಗೆ ಬಂದು ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಭಾರತೀಯ ರೆಡ್‌ಕ್ರಾಸ್‌ದಿಂದ ಅಂತರರಾಷ್ಟಿçÃಯ ಯೋಗ ದಿನ ಆಚರಣೆ
ಕಲಬುರಗಿ.ಜೂ.೨೧(ಕ.ವಾ)-ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಸೋಮವಾರ ೭ನೇ ಅಂತರರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ ಬಸವರಾಜ ಗಾದರೆ ಮಾತನಾಡಿ, ಯೋಗ ನಮ್ಮ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿದೆ. ಎಲ್ಲರೂ ನಿಯಮಿತವಾಗಿ ಮತ್ತು ಕ್ರಮಬದ್ದವಾಗಿ ಯೋಗ ಮಾಡಬೇಕು ಎಂದರು.

ಕಲಬುರಗಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಹಿಯಾ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಟಿಯು ಕಲಬುರಗಿ ಪ್ರಾದೇಶಿಕ ಕಚೇರಿ ಆವರಣದಲ್ಲಿ ಜಿಲ್ಲಾ ಪ್ರಭಾರಿ ಭಾರತ ಸ್ವಾಭಿಮಾನ ಸಮಿತಿಯ ಶಿವಾನಂದ ಸಾಲಿಮಠ ಅವರು ಆನ್‌ಲೈನ್ ಮೂಲಕ ಯುವ ವಿದ್ಯಾರ್ಥಿಗಳಿಗೆ ಯೋಗಾಸನ ಕುರಿತು ತರಬೇತಿ ನೀಡಿದರು. ಆನ್‌ಲೈನ್ ಯೋಗಾ ತರಬೇತಿಯಲ್ಲಿ ೫೦೦ ಕ್ಕೂ ಹೆಚ್ಚು ಜನರು ಪಾಲ್ಗೊಂಡಿದರು.

ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಎಮ್. ಜಿ.ಎಸ್. ಪದ್ಮಾಜಿ, ಶಿವರಾಜ , ಡಾ ಶಂಭುಲಿAಗಪ್ಪ, ಪ್ರೋ. ಶರಣಗೌಡ ಬಿರಾದಾರ, ಡಾ. ಶಿವರಾಮನಗೌಡ, ಗೀತಾ ಪರಿವಾರ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories