ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ

ಕಲಬುರಗಿ.ಜೂ.೨೫.(ಕ.ವಾ)-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ” ನೀಡಲಾಗುವ ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್” ಗಳನ್ನು ಕಲಬುರಗಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಅವರು ಕಲಬುರಗಿ ನಗರದ ನಂದಗೋಕುಲ ಬಡಾವಣೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಶುಕ್ರವಾರ ವಿತರಿಸಿದರು.

ನಂತರ ಅಧ್ಯಕ್ಷರು ಕಲಬುರಗಿ ನಗರದ ಶಕ್ತಿ ನಗರ, ಅಕ್ಕಮಾಹಾದೇವಿ ನಗರ, ಹೈಕೋರ್ಟ ಬಡಾವಣೆಗಳಲ್ಲಿನ ಸುಮಾರು ೧೫೦ ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್”ಗಳನ್ನು ವಿತರಿಸಿದರು.

ಮಹಿಳಾ ಕಾರ್ಮಿಕರಿಗೆ ವಿತರಿಸಲಾದ ಕಿಟ್ ಪಿಂಕ್ ಬಣ್ಣದಾಗಿದ್ದು, ಇದರಲ್ಲಿ ಸ್ಯಾನಿಟೈಸರ್, ಹ್ಯಾಂಡವಾಶ್, ಸೋಪ್ , ಬಟ್ಟೆ ಸೋಪ್, ಎರಡು ತರಹದ ಮಾಸ್ಕ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳಿವೆ. ಅದೇ ರೀತಿ ಪುರುಷ ಕಾರ್ಮಿಕರಿಗೆ ವಿತರಿಸಲಾದ ಕಪ್ಪು ಬಣ್ಣದ ಕಿಟ್ ನಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸೋಪ್, ಬಟ್ಟೆ ಸೋಪ್ ಮತ್ತು ಎರಡು ತರಹದ ಮಾಸ್ಕ್ ಒಳಗೊಂಡಿದೆ.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇಷನರಿ ಕಾರ್ಮಿಕ ಅಧಿಕಾರಿ ಡಾ. ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕಣ ð, ಏಕ್ಸಿಕ್ಯೂಟಿವ್ ಮಂಜುನಾಥ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Latest Indian news

Popular Stories