ಜುಲೈ ಮಾಹೆ: ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ

ಕಲಬುರಗಿ,ಜುಲೈ.೦೨.(ಕ.ವಾ.)-ಕೋವಿಡ್-೧೯ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ ೨೦೨೧ರ ಜುಲೈ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ/ ಅಂತ್ಯೋದಯ ಅನ್ನ, ಪಿ.ಹೆಚ್.ಹೆಚ್./ ಆದ್ಯತಾ ಹಾಗೂ ಎ.ಪಿ.ಎಲ್. (ಆದ್ಯತೇತರ) ಪಡಿತರ ಚೀಟಿ ಕಾರ್ಡುದಾರರಿಗೆ ಈ ಕೆಳಗಿನಂತೆ ಪಡಿತರ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕೋವಿಡ್-೧೯ ನಿಯಮಗಳನ್ನು ಪಾಲಿಸಿ, ಜನದಟ್ಟಣೆ ಉಂಟಾಗದAತೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪಡಿತರ ಆಹಾರ ಧಾನ್ಯವನ್ನು ಪಡೆಯಬೇಕೆಂದು ಡಿ.ಸಿ. ಅವರು ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ೬೩,೪೫೯ ಎಎವೈ ಪಡಿತರ ಚೀಟಿಗಳ ೨,೬೪,೨೬೦ ಸದಸ್ಯರಿಗೆ ಮತ್ತು ೪,೮೯,೧೦೦ ಪಿ.ಎಚ್.ಎಚ್. ಪಡಿತರ ಚೀಟಿಗಳ ೧೬,೬೦,೪೨೮ ಸದಸ್ಯರಿಗೆ ಹಾಗೂ ೧೮,೨೬೩ ಎ.ಪಿ.ಎಲ್. (ವಿಲ್ಲಿಂಗ್‌ನೆಸ್) ಪಡಿತರ ಕಾರ್ಡುದಾರರಿಗೆ ಈ ಕೆಳಗಿನಂತೆ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ.
ಎಎವೈ/ ಅಂತ್ಯೋದಯ ಅನ್ನ: ಎನ್.ಎಫ್.ಎಸ್.ಎ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ ೨೦ ಕೆ.ಜಿ. ಜೋಳ, ೧೫ ಕೆ.ಜಿ. ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ ೫ ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ.
ಪಿ.ಹೆಚ್.ಹೆಚ್./ ಆದ್ಯತಾ: ಎನ್.ಎಫ್.ಎಸ್.ಎ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ ೩ ಕೆ.ಜಿ. ಜೋಳ, ೨ ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ ೫ ಕೆ.ಜಿ ಅಕ್ಕಿ ಸೇರಿದಂತೆ ಪ್ರತಿ ಸದಸ್ಯರಿಗೆ ಒಟ್ಟು ೭ ಕೆ.ಜಿ. ಅಕ್ಕಿ ಹಾಗೂ ೩ ಕೆ.ಜಿ. ಜೋಳ ವಿತರಿಸಲಾಗುತ್ತದೆ. ಇದಲ್ಲದೇ ಪ್ರತಿ ಪಡಿತರ ಚೀಟಿಗೆ ೨ ಕೆ.ಜಿ. ಗೋಧಿ ಸಹ ಉಚಿತವಾಗಿ ವಿತರಿಸಲಾಗುತ್ತದೆ.
ಎಪಿಎಲ್ /ಆದ್ಯತೇತರ (Willingness): ಏಕಸದಸ್ಯ ಇರುವ ಪಡಿತರ ಚೀಟಿಗೆ ೫ ಕೆ.ಜಿ ಅಕ್ಕಿ ಮತ್ತು ಒಂದಕ್ಕಿAತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ ೧೦ ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ದರ ೧೫ ರೂ. ರಂತೆ ವಿತರಿಸಲಾಗುತ್ತದೆ.
ಅಂತರರಾಜ್ಯ/ ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ (Portability): ಅಂತರರಾಜ್ಯ/ ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!