ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟನೂರ ಡಿ: ಆಂಗ್ಲ ಮಾಧ್ಯಮಕ್ಕೆ ಉಚಿತ ಪ್ರವೇಶ ಆರಂಭ

ಕಲಬುರಗಿ.ಜುಲೈ.೧೫.(ಕ.ವಾ.)- ಕಲಬುರಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟನೂರ ಡಿ ಕಲಬುರಗಿ ದಕ್ಷಿಣ ವಲಯ ಜಿಲ್ಲಾ ಕಲಬುರಗಿಯಲ್ಲಿ ೨೦೨೧-೨೨ ನೇ ಶೈಕ್ಷಣ ಕ ಸಾಲಿನ ಆಂಗ್ಲ ಮಾಧ್ಯಮಕ್ಕೆ ಪ್ರವೇಶಗಳು ಪ್ರಾರಂಭವಾಗಿವೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟನೂರ (ಡಿ) ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೨೧-೨೨ ನೇ ಸಾಲಿನಲ್ಲಿ ೧ನೇ ತರಗತಿಗಾಗಿ ಆಂಗ್ಲ ಮಾಧ್ಯಮಕ್ಕೆ ಪ್ರವೇಶಗಳು ಪ್ರಾರಂಭವಾಗಿದ್ದು, ಪ್ರವೇಶಕ್ಕಾಗಿ ಮಕ್ಕಳಿಗೆ ಯಾವುದೇ ಶುಲ್ಕವಿರುವುದಿಲ್ಲ, ಉಚಿತ ಪಠ್ಯ ಪುಸ್ತಕ, ಉಚಿತ ಸೈಕಲ್, ಗ್ರಂಥಾಲಯ ಸೌಲಭ್ಯ, ಕ್ಷೀರಭಾಗ್ಯ ಯೋಜನೆ, ಶಿಷ್ಯ ವೇತನ, ಸುಸಜ್ಜಿತ ಕೊಠಡಿಗಳು, ಆಧುನಿಕ ವಿಜ್ಞಾನ ಪ್ರಯೋಗಾಲಯ, ನಲಿಕಲಿ ಮೂಲಕ ಬೋಧನೆ, ಉಚಿತ ಸಮವಸ್ತç, ಶೂಮತ್ತು ಸಾಕ್ಸ್, ಮಧ್ಯಾಹ್ನ ಬಿಸಿ ಊಟ, ಆಹಾರ ಧ್ಯಾನ್ಯ ವಿತರಣೆ, ನುರಿತ ಮತ್ತು ಉನ್ನತ ಶಿಕ್ಷಣ ಪಡೆದ ಶಿಕ್ಷಕರಿಂದ ಬೋಧನೆ ಮಾಡಲಾಗುವುದು. ಪಾಲಕರು ಹೆಚ್ಚಿನ ಮಾಹಿತಿಗಾಗಿ ೯೯೮೦೭೯೨೦೭೯ ಹಾಗೂ ೯೬೩೨೫೪೪೦೪೮ ಗೆ ಸಂಪರ್ಕಿಸಬಹುದು.

Latest Indian news

Popular Stories

error: Content is protected !!