ಕುಸನೂರ ವಸತಿ ಯೋಜನೆ: ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುವ ಅವಧಿ ವಿಸ್ತರಣೆ

ಕಲಬುರಗಿ.ಜು.೧೯.(ಕ.ವಾ)-ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ನೂತನ ವಸತಿ ಯೋಜನೆಯಲ್ಲಿ ವಿವಿಧ ಅಳತೆಗಳ ನಿವೇಶನಗಳ ಹಂಚಿಕೆ ಮಾಡುವಿಕೆಗೆ ಸಂಬAಧಿಸಿದAತೆ ಸಾರ್ವಜನಿಕರಿಂದ ಭರ್ತಿ ಮಾಡಿದ ಅರ್ಜಿ ಸ್ವೀಕರಿಸುವ ಕೊನೆಯ ದಿನವನ್ನು ೨೦೨೧ರ ಸೆಪ್ಟೆಂಬರ್ ೧೪ ರ ಸಂಜೆ ೫ ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ಇದಲ್ಲದೇ ಸಾರ್ವಜನಿಕರಿಗೆ ಅರ್ಜಿ ವಿತರಿಸುವ ಕೊನೆಯ ದಿನಾಂಕವನ್ನು ಸಹ ೨೦೨೧ರ ಆಗಸ್ಟ್ ೨೪ರವರೆಗೆ ವಿಸ್ತರಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಇನ್ನುಳಿದ ಷರತ್ತು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕರನ್ನು ಕಚೇರಿ ಅವಧಿಯಲ್ಲಿ ಹಾಗೂ ಮೊಬೈಲ್ ಸಂಖ್ಯೆ 9591499501 ಸಂಪರ್ಕಿಸಲು ಕೋರಲಾಗಿದೆ.

ಈ ಹಿಂದೆ ಅರ್ಜಿ ವಿತರಿಸುವ ಕೊನೆಯ ದಿನಾಂಕವನ್ನು ಜೂನ್ ೨೨ ರಿಂದ ಜುಲೈ ೨೦ ರವರೆಗೆ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ಆಗಸ್ಟ್ ೨೪ರ ಸಂಜೆ ೫ಗಂಟೆಯವರೆಗೆ ನಿಗದಿಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!