ಲಾಕ್‌ಡೌನ್ ತೆರವು: ಜೂನ್ ೨೧ ರಿಂದ ಬಸ್‌ಗಳ ಕಾರ್ಯಾಚರಣೆ

ಕಲಬುರಗಿ,ಜೂ.೨೦.(ಕ.ವಾ)-ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ನಲ್ಲಿ ಸಡಿಲಿಕೆ ನೀಡಿರುವ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-೧ ರಿಂದ ಸೋಮವಾರ ಜೂನ್ ೨೧ ರಿಂದ ಜಾರಿಗೆ ಬರುವಂತೆ ಕಲಬುರಗಿ ನಗರ ಹಾಗೂ ಕಲಬುರಗಿಯಿಂದ ವಿವಿದ ತಾಲೂಕು, ಜಿಲ್ಲೆಗಳಿಗೆ ಸಂಚರಿಸಲು ೧೫೦ ರಿಂದ ೨೦೦ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗ-೧ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಹೆಚ್.ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಚಿಂಚೋಳಿ, ಚಿತ್ತಾಪೂರ, ಕಾಳಗಿ, ಸೇಡಂ ಮತ್ತು ಯಾದಗಿರಿ, ವಿಜಯಪುರ, ಹುಮನಾಬಾದ್, ಬಸವಕಲ್ಯಾಣ, ಬೀದರ್ ಮಾರ್ಗಗಳಿಗೆ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.
ಆಸನ ಸಾಮರ್ಥ್ಯದ ಶೇ. ೫೦ರಷ್ಟು ಮಾತ್ರ ಪ್ರಯಾಣ ಕರು ಪ್ರಯಾಣ ಸಲು ಅನುಮತಿ ನೀಡಲಾಗಿದೆ. ಪ್ರತಿಯೊಬ್ಬ ಪ್ರಯಾಣ ಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರಯಾಣ ಸಲು ಅನುಮತಿ ನೀಡಲಾಗಿದೆ. ಪ್ರಯಾಣ ಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಂತೆ ಬಸ್ಸಿನಲ್ಲಿ ಹತ್ತಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಪ್ರಯಾಣ ಕರ ದಟ್ಟಣೆಯನ್ನು ನೋಡಿಕೊಂಡು ಹಂತ ಹಂತವಾಗಿ ಅಂತರ ರಾಜ್ಯದ ನಿಯಮ/ನಿರ್ದೇಶನದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ (ಸೋಲಾಪೂರ, ಹೈದ್ರಾಬಾದ್ ಮಾರ್ಗಗಳಿಗೆ) ಪ್ರಯಾಣ ಕರ ಅಗತ್ಯತೆಗೆ ತಕ್ಕಂತೆ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!