ರೈತರಿಗೆ ಉಚಿತವಾಗಿ ತೊಗರಿ ಮತ್ತು ಹೆಸರು ಬೀಜಗಳ ಮಿನಿಕಿಟ್ ವಿತರಣೆ

ಕಲಬುರಗಿ.ಜೂ.೩೦(ಕ.ವಾ)-ಚಿತ್ತಾಪೂರ ತಾಲೂಕಿನಲ್ಲಿ ದ್ವಿದಳದಾನ್ಯಗಳ ಕ್ಷೇತ್ರ ಹಾಗೂ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ೨೦೨೧-೨೨ನೇ ಸಾಲಿನ ಎನ್.ಎಫ್.ಎಸ್.ಎಂ ಯೋಜನೆಯಡಿ ಚಿತ್ತಾಪುರ ಶಾಸಕರಾದ ಪ್ರಿಯಾಂಕ್ ಎಂ. ಖರ್ಗೆ ಅವರು ಬುಧವಾರ ಚಿತ್ತಾಪೂರ ತಾಲೂಕಿನ ರೈತರಿಗೆ ತೊಗರಿ ಮತ್ತು ಹೆಸರು ಬೀಜಗಳ ಮಿನಿಕಿಟ್‌ಗಳನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಸಿದ್ದುಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ, ಕೃಷಿ ಅಧಿಕಾರಿ ವಿಲಾಸ ಹರಸೂರ, ಕರಣಕುಮಾರ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.

Latest Indian news

Popular Stories

error: Content is protected !!