ಕಲಬುರಗಿ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ

ಕಲಬುರಗಿ.ಜೂನ್.೩೦.(ಕ.ವಾ)-ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಕಲಬುರಗಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ ಕರಡು ಮತದಾರರ ಪಟ್ಟಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಶಾಖೆ ಹಾಗೂ ವಾರ್ಡ್ಗಳ ವ್ಯಾಪ್ತಿಗಳಲ್ಲಿ ಸೋಮವಾರ ಜೂನ್ ೨೮ ರಂದು ಕಲಬುರಗಿ ವiಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ.ಜ್ಯೋತ್ಸಾö್ನ ಅವರು ತಿಳಿಸಿದ್ದಾರೆ.

ಈ ಕರಡು ಮತದಾರರ ಪಟ್ಟಿಗೆ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ವ್ಯಕ್ತಿಗಳು/ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಸಂಕಲನಕ್ಕೆ ಸಂಪರ್ಕಿಸಿ ೨೦೨೧ರ ಜುಲೈ ೧ ರೊಳಗಾಗಿ ತಮ್ಮ ಲಿಖಿತವಾಗಿ ಆಕ್ಷೇಪಣೆಯನ್ನು ಸಲ್ಲಿಸಿ ಸ್ವೀಕೃತಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ

ಗೌರವ ಪ್ರಾಣ ಕಲ್ಯಾಣಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ಕಲಬುರಗಿ.ಜೂನ್.೩೦.(ಕ.ವಾ)-ಕಲಬುರಗಿ ಜಿಲ್ಲೆಯಾದ್ಯಂತ ಜಿಲ್ಲಾ ಪ್ರಾಣ ದಯಾ ಸಂಘ (ಎಸ್.ಪಿ.ಸಿ.ಎ.) ಅಡಿಯಲ್ಲಿ ಪ್ರಾಣ ಗಳ ಕಲ್ಯಾಣ ಚಟುವಟಿಕೆ ಹಾಗೂ ಇನ್ನಿತರ ಸಂಭAದಿತ ಚಟುವಟಿಕೆಗಳ-ಸಮನ್ವಯ ಸಹಯೋಗಕ್ಕಾಗಿ ವಯಸ್ಸು ೨೫ ವರ್ಷ ಮೇಲ್ಪಟ್ಟ ಅನುಭವವುಳ್ಳ (ಯಾವುದೇ ರೀತಿಯ ಸಂಭಾವನೆ ಅಪೇಕ್ಷಿಸದ) ಓರ್ವ ಗೌರವ ಪ್ರಾಣ ಕಲ್ಯಾಣಾಧಿಕಾರಿಗಳ (ಊoಟಿoಡಿಚಿಡಿಥಿ ಂಟಿimಚಿಟ Weಟಜಿಚಿಡಿe oಜಿಜಿiಛಿeಡಿ) ಹುದ್ದೆಯ ನೇಮಕಾತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಾಣ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕಲ್ಲದೇ ೨ ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಕುರಿತು ಅನುಭವ ಇರಬೇಕು. ಕನಿಷ್ಠ ೨೫ ವರ್ಷ ವಯಸ್ಸಾಗಿರಬೇಕು. ವಕೀಲ ವೃತ್ತಿ ಅಥವಾ ಕಾನೂನು ಅರಿವು ಉಳ್ಳವರಿಗೆ ಆದ್ಯತೆ ನೀಡಲಾಗುತ್ತದೆ.

ಆಸಕ್ತಿಯುಳ್ಳವರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ೨೦೨೧ರ ಜುಲೈ ೩೧ ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪಶುಪಾಲನಾ ಕಚೇರಿಯ ತಾಂತ್ರಿಕ ಶಾಖೆಗೆ ಸಂಪರ್ಕಿಸಲು ಕೋರಲಾಗಿದೆ

Latest Indian news

Popular Stories

error: Content is protected !!