ಪಾಲಿಕೆಯಿಂದ ಪೌರ ಕಾರ್ಮಿಕರಿಗೆ ಶೂ ವಿತರಣೆ

ಕಲಬುರಗಿ,ಜೂನ್.೮(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸಾಕ್ಸ್ ಮತ್ತು ಬೂಟುಗಳನ್ನು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ವಿತರಿಸಿದರು.

ಮಂಗಳವಾರ ಇಲ್ಲಿನ ಟೌನ್‌ಹಾಲ್ ಬಳಿ ಸಾಂಕೇತಿಕವಾಗಿ ೫೦ ಜನ ಪೌರ ಕಾರ್ಮಿಕರಿಗೆ ಬೂಟುಗಳನ್ನು ವಿತರಿಸಿ ಮಾತನಾಡಿದ ಅವರು, ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೦೦೦ ಪೌರ ಕಾರ್ಮಿಕರ ದೈಹಿಕ ಹಿತರಕ್ಷಣೆಗಾಗಿ ಬೂಟ್ ಹಾಗೂ ಸಾಕ್ಸ್ಗಳನ್ನು ಇಂದು ನೀಡಲಾಗುತ್ತಿದೆ. ಹಿಂದೆ ಮಾಸ್ಕ್ಕ್ ಮತ್ರು ಹ್ಯಾಂಡ್ ಗ್ಲೋವ್ಸ್ ನೀಡಲಾಗಿತ್ತು ಎಂದರು.

ಕೇAದ್ರ ಸರ್ಕಾರದ ನಿರ್ದೇಶನದಂತೆ ಪುರುಷ ಮತ್ತು ಮಹಿಳಾ ಪೌರಕಾರ್ಮಿಕರಿಗೆ ಪ್ರತ್ಯೇಕ ಸಮವಸ್ತç ಖರೀದಿಗೆ ಈಗಾಗಲೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಹಂತ ಹಂತವಾಗಿ ಸಮವಸ್ತç, ರೇನ್‌ಕೋಟ್ ಸಹ ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ ಎಂದರು.

ಪೌರಕಾರ್ಮಿಕರ ಸುರಕ್ಷತೆಗಾಗಿ ಪ್ರತಿ ೬ ತಿಂಗಳಿಗೊಮ್ಮೆ ಬಟ್ಟೆ, ಗ್ಲೌಸ್, ಮಾಸ್ಕ್, ಬೂಟ್ ಹೀಗೆ ಎಲ್ಲಾ ರೀತಿಯ ಸುರಕ್ಷಾ ಪರಿಕರಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ. ಕೊಳಚೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವವರಿಗೆ ಪಿ.ಪಿ.ಇ ಕಿಟ್‌ಗಳನ್ನು ಸಹ ಕೊಡಲಾಗುವುದು. ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಹಾಕಿಕೊಂಡೆ ಪ್ರತಿನಿತ್ಯ ಕರ್ತವ್ಯ ನಿರ್ವಹಿಸಬೇಕು. ನೀವು ಆರೋಗ್ಯವಾಗಿದ್ದರೆ, ನಗರ ಆರೋಗ್ಯವಾಗಿರುತ್ತದೆ ಎಂದು ಕಾರ್ಮಿಕರಿಗೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಅಭಿಯಂತರರಾದ ಸುಷ್ಮಾಸಾಗರ, ಮೆಲಕೇರಿ ಬಾಬು ಸೇರಿದಂತೆ ಪಾಲಿಕೆ ಸಿಬ್ಬಂದಿಗಳು ಹಾಜರಿದ್ದರು.

ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಜಾಫರ್ ಅಹ್ಮದ್ ಅಧಿಕಾರ ಸ್ವೀಕಾರ

ಕಲಬುರಗಿ,ಜೂನ್.೮.(ಕ.ವಾ)-ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಕಲಬುರಗಿ ಉಪವಿಭಾಗ-೧ರ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಜಾಫರ್ ಅಹ್ಮದ್ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.

ಕಲಬುರಗಿ ಉಪವಿಭಾಗ-೧ರ ಕಚೇರಿಯ ವ್ಯಾಪ್ತಿಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಹಾಗೂ ಚಿತ್ತಾಪುರ ಮತಕ್ಷೇತ್ರಗಳು ಒಳಗೊಂಡಿರುತ್ತವೆ. ಈ ಕಚೇರಿಗೆ ಸಂಬAಧಿಸಿದAತೆ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ರಹಸ್ಯ ಪತ್ರ ಹಾಗೂ ಖಾಸಗಿ ಪತ್ರಗಳನ್ನು ಜಾಫರ್ ಅಹ್ಮದ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ಕಲಬುರಗಿ ಉಪವಿಭಾಗ-೧, ರಾಜಾಪೂರ-ಕುಸನೂರ ರಸ್ತೆ, ಕಲಬುರಗಿ-೫೮೫೧೦೫ ಕಲಬುರಗಿ ಈ ವಿಳಾಸಕ್ಕೆ ವ್ಯವಹರಿಸಬೇಕೆಂದು ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!