ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ

ಕಲಬುರಗಿ.ಜುಲೈ.೧೭.(ಕ.ವಾ.)-ಕಲಬುರಗಿ ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಯುವ ಕೌಶಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ಬಿ. ದೊಡ್ಡಮನಿ “ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮತ್ತು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಗಳ ಅಡಿಯಲ್ಲಿ ನೊಂದಾಯಿತ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡಿ ಮತ್ತು ಉದ್ಯೋಗ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಯುವಕರು ಈ ಯೋಜನೆಗಳ ಲಾಭ ಪಡೆಯಬೇಕು. ಯುವಕ, ಯುವತಿಯರು ಇಲಾಖೆಯ https://www.kaushalkar.com/ ವೆಬ್‌ಸೈಟ್ ಮೂಲಕ ಕೌಶಲ್ಯದ ವಿವಿಧ ತರಬೇತಿಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಡೆಲ್ಲಿ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ಕಲಬುರಗಿ ಕಾಲೇಜಿನ ಅಧ್ಯಕ್ಷರಾದ

ಅಭಿಷೇಕ ರಾಘವೇಂದ್ರ ಕುಲಕಣ ð ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಕುರಿತು ಸುಮಾರು ಎರಡು ಗಂಟೆಗಳ ಕಾಲ ಪಿಪಿಟಿ ಮೂಲಕ ಶಿಬಿರಾರ್ಥಿಗಳಿಗೆ ಸಮಗ್ರವಾದ ಮಾಹಿತಿ ನೀಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರಾದ ಸಾತಯ್ಯ ಹಿರೇಮಠ ಅವರು ಮಾತನಾಡಿ, “ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಇಲಾಖೆಯಲ್ಲಿ ಲಭ್ಯವಿರುವ ತರಬೇತಿಗಳು ಮತ್ತು ತರಬೇತಿ ಪಡೆದ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳಿAದ ಆರ್ಥಿಕ ನೆರವು ಪಡೆಯಲು ಯಾವ ರೀತಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂಬುದರ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರಾದ ರಾಜಕುಮಾರ ಎಸ್. ಗುತ್ತೇದಾರ ಮಾತನಾಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಜಮಾದಾರ್, ಡೆಲ್ಲಿ ಪ್ಯಾರಾಮೆಡಿಕಲ್ ಇನ್ಸಟಿಟ್ಯೂಟ್ ಪ್ರಾಚಾರ್ಯ ರಾಜೇಶ್ವರಿ ಎಸ್. ಕಡಗಂಚಿ, ಜಿಲ್ಲಾ ಸಂಯೋಜಕ ಮೌನೇಶ ಪೊದ್ದಾರ, ಎಮ್.ಜಿ.ಎನ್.ಎಫ್. ಕುಮಾರಿ ಮೇಘನಾ ಎಸ್. ಕೆ. ಅವರು ಉಪಸ್ಥಿತರಿದ್ದರು.

ಕಲಬುರಗಿ ಸರ್ಕಾರಿ ಐಟಿಐ ಕಾಲೇಜಿನ ಜೆ.ಟಿ.ಓ. ಎಂ. ಎ. ಪಾಟೀಲ ಅವರು ಸ್ವಾಗತಿಸಿದರು. ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಹಾಗೂ ಡೆಲ್ಲಿ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್ ಕಲಬುರಗಿ (ಡಿಪಿಎಮ್‌ಐ) ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ಸುಮಾರು ೬೦ ಯುವಕ, ಯುವತಿಯರು ಭಾಗವಹಿಸಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಯುವಕ, ಯುವತಿಯರಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಯಿತು.

Latest Indian news

Popular Stories