ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-೧೯ ಪರಿಹಾರ ಪ್ಯಾಕೇಜ್ ಘೋಷಣೆ ಕುರಿತು ಉಚಿತ ಪ್ರಕಟಣೆ ಹೊರಡಿಸುವ ಬಗ್ಗೆ

ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಮಾನ್ಯ ಮುಖ್ಯಮಂತ್ರಿಗಳು ಕೊವೀಡ್-೧೯ ಲಾಕ್‌ಡೌನ ಎರಡನೇ ಅಲೆ ಹರಡುತ್ತಿರುವುದರಿಂದ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಅಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-೧೯ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುತ್ತದೆ.
ಆದ್ದರಿಂದ ಸ್ಥಳೀಯ ಎಲ್ಲಾ ದಿನಪತ್ರಿಕೆಯಲ್ಲಿ ಈ ಪತ್ರದೊಂದಿಗೆ ಪತ್ರಿಕಾ ಪ್ರಕಟಣೆಯ ಮಾದರಿಯನ್ನು ಲಗತ್ತಿಸಿ ಸದರಿ ಮಾಹಿತಿಯನ್ನು ಸಾಕಷ್ಟು ಪ್ರಚಾರ ಮಾಡಬೇಕೆಂದು ಈ ಮೂಲಕ ಕೋರಲಾಗಿದೆ.

ಕಟ್ಟಡ ಕಾರ್ಮಿಕರಿಗೆ ಲಸಿಕೆ ಹಾಗೂ ಆರ್ಥಿಕ ನೆರವು ಪಡೆÀಯುವ ಸಂಬAಧ ಚರ್ಚೆ
ಕೊವಿಡ್-೧೯ ವಿರುದ್ದ ರಕ್ಷಣೆ ಪಡೆಯಲು ಕಟ್ಟಡ ಕಾರ್ಮಿಕರು ಆದ್ಯತಾ ವಲಯದ ಕಾರ್ಮಿಕರಾಗಿ ಲಸಿಕೆ ಪಡೆಯಲು ಹಾಗೂ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ವಿತರಣೆ ಬಗ್ಗೆ ಕಾರ್ಮಿಕ ಇಲಾಖೆಯಲ್ಲಿ ಉಪ ಕಾರ್ಮಿಕ ಆಯುಕ್ತರು ಕಾರ್ಮಿಕ ಸಂಘಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ, ಕೋವಿಡ್-೧೯ ರ ವಿರುದ್ದ ಲಸಿಕೆ ಪಡೆಯಲು ಕಟ್ಟಡ ಕಾರ್ಮಿಕರು ಮುಂದಾಗುತ್ತಿಲ್ಲವೆAದು, ಅವರಿಗೆ ಅರಿವು ಮೂಡಿಸಿ, ಮನವೊಲಿಸಲು ಕಾರ್ಮಿಕ ಸಂಘದವರಿಗೆ ತಿಳುವಳಿಕೆ ನೀಡಲಾಯಿತು. ಲಾಕ್‌ಡ್‌ನ್ ಪ್ರಯುಕ್ತ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಕ್ರಮವಾಗಿ ರೂ ೩೦೦೦ ಮತ್ತು ೨೦೦೦ ದಂತೆ ಪಡೆಯಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ತಿಳಿಸಲಾಯಿತು.
ಅದರಂತೆ ಈಗಾಗಲೆ ನೊಂದಣಿಯಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹೊಸದಾಗಿ ಅರ್ಜಿ ಹಾಕಬೇಕಾಗಿರುವುದಿಲ್ಲ. ಅವರವರ ಖಾತೆಗೆ ಮಂಡಳಿಯಿAದ ನೇರಾವಾಗಿ ಡಿ ಬಿ ಟಿ ಮೂಲಕ ಪರಿಹಾರ ಜಮೆ ಮಾಡಲಾಗುವುದು. ನೊಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಯಲ್ಲಿ ಇಡುವಂತೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಜೊಡಣೆ ಮಾಡಿಕೊಳ್ಳಲು ತಿಳಿಸಲಾಯಿತು.
ಅಸಂಘಟಿತ ಕಾರ್ಮಿಕರಲ್ಲಿ ಕಳೆದಬಾರಿ ಪರಿಹಾರ ನೀಡಲಾದ ಅಗಸರು ಮತ್ತು ಕ್ಷೌರಿಕರಿಗೆ ಅವರ ಖಾತೆಗೆ ನೇರವಾಗಿ ಪರಹಾರ ಜಮೆ ಮಾಡಲಾಗುವುದು, ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿರುವುದಿಲ್ಲ. ಉಳಿದಂತೆ ಟೈಲರ್‌ಗಳು, ಹಮಾಲಿ, ಕುಂಬಾರರು, ಕಮ್ಮಾರರು, ಭಟ್ಟಿ ಕಾರ್ಮಿಕರು, ಮನೆ ಕೆಲಸದವರು, ಮೆಕ್ಯಾನಿಕ್ಸ, ಅಕ್ಕಸಾಲಿಗರು ಮತ್ತು ಚಿಂದಿ ಆಯುವವರು ಪರಿಹಾರಕ್ಕಾಗಿ ಸೇವಾ ಸಿಂಧುವಿನಲ್ಲಿ ಅರ್ಜಿಸಲ್ಲಿಸಬೇಕಾಗಿರುತ್ತದೆ. ಜೂನ್ ೫ರಿಂದ ಸೇವಾ ಸಿಂಧುವಿನಲ್ಲಿ ಅರ್ಜಿಸಲ್ಲಿಸಲು ಅವಕಾಶವಿದ್ದು ಅರ್ಜಿಸಲ್ಲಿಸುವವರು ಕರ್ನಾಟಕ ರಾಜ್ಯದ ವಾಸಿಗಳಾಗಿದ್ದು ಬಿ.ಪಿ.ಎಲ್ ಕಾರ್ಡ ಹೊಂದಿರಬೇಕಾಗಿರುತ್ತದೆ. ಅರ್ಜಿಯೊಂದಿಗೆ ಆಧಾರ ಕಾರ್ಡ ಮತ್ತು ಉದ್ಯೋಗ ಪ್ರಮಾಣ ಪತ್ರ ಅಪ್‌ಲೋಡ್ ಮಾಡÀಬೇಕಾಗಿರುತ್ತದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ತಮ್ಮನ್ನು ಲೌಕ್‌ಡೌನ್ ಅವಧಿ ಇರುವರೆಗು ನೊಂದಾಯಿಸಲು ಸೇವಾ ಸಿಂಧುವಿನಲ್ಲಿ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಅಸಂಘಟಿತ ಕಾರ್ಮಿಕರು ತಮ್ಮನ್ನು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೊಜನೆ ಅಡಿಯಲ್ಲಿ ಲೌಕ್‌ಡೌನ್ ಅವಧಿವರೆಗು ನೊಂದಾಯಿಸಿಕೊಳ್ಳಬಹುದಾಗಿದೆ
ಕಾರ್ಮಿಕರು ಪರಿಹಾರಕ್ಕಾಗಿ ಂiÀiವುದೇ ಸಂಘ ಸಂಸ್ಥೆ, ಮದ್ಯವರ್ತಿ ಮೊದಲಾದವರುಗಳಿಗೆ ದಾಖಲೆ ಮತ್ತು ಹಣ ನೀಡಬಾರದೆಂದು ಮನವಿ ಮಾಡಲಾಯಿತು. ಸಭೆಯಲ್ಲಿ ಶ್ರೀಮತಿ ಆರತಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನೀರಿಕ್ಷಕರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಅಮೂಲ್ಯ ಸಲಹೆ ನೀಡಿದರು.

Latest Indian news

Popular Stories