ಜೂನ್ ೧೪ ರಿಂದ ಕಲಬುರಗಿ ನಗರದಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಆದೇಶ

ಕಲಬುರಗಿ,ಜೂನ್.೧೪.(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ನಗರದಾದ್ಯಂತ ಇದೇ ಜೂನ್ ೧೪ರ ಬೆಳಿಗ್ಗೆ ೬ ಗಂಟೆಯಿAದ ೨೦೨೧ರ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯವರೆಗೆ ಕಂಟೋನ್ಮೆAಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಕಲಂ ೩೪ (ಎಂ) ರಡಿಯಲ್ಲಿ ಹಾಗೂ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ರ ಕಲಂ ೧೪೪ ರನ್ವಯ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಎಸ್. ರವಿಕುಮಾರ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದಾದ್ಯಂತಹ ಇದೇ ಜೂನ್ ೧೪ ರಿಂದ ಅನ್ವಯವಾಗುವಂತೆ ಪ್ರತಿದಿನ ಸಂಜೆ ೭ ಗಂಟೆಯಿAದ ಬೆಳಗಿನ ೬ ಗಂಟೆಯವರೆಗೆ ನೈಟ್ ಕರ್ಫ್ಯೂ ಹಾಗೂ ೨೦೨೧ರ ಜೂನ್ ೧೮ರ ಸಂಜೆ ೭ ಗಂಟೆಯಿAದ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯವರೆಗೆ ಸಿ.ಆರ್.ಪಿ.ಸಿ. ೧೪೪ರ ರನ್ವಯ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಿ ಅವರು ಆದೇಶ ಹೊರಡಿಸಿದ್ದಾರೆ.

Latest Indian news

Popular Stories

error: Content is protected !!