ಜಂಟಿ ಕೃಷಿ ನಿರ್ದೇಶಕರು ಕಲಬುರ್ಗಿ ಇವರು ಜಿಲ್ಲೆಯ ಎಲ್ಲ ರೈತ ಭಾಂಧವರಲ್ಲಿ ಈ ಕೆಳಕಾಣ ಸಿದಂತೆ ಮನವಿ ಮಾಡಿರುತ್ತಾರೆ

ಹಳ್ಳಿಗಳಲ್ಲಿ ಅಪರಿಚಿತ ವ್ಯಕ್ತಿಗಳು (ಲೈಸನ್ಸ/ಪರವಾನಿಗೆ ಇಲ್ಲದೆ ) ಬೀಜ/ರಸಗೋಬ್ಬರ/ಕೀಟನಾಶಕ ಪರಿಕರಗಳನ್ನು ಮಾರಾಟ ಮಾಡಲು ಬಂದಲ್ಲಿ ಅಂತಹವರಿAದ ಯಾವುದೇ ತರಹದ ಪರಿಕರಗಳನ್ನು ಖರೀದಿಸಬಾರದು. ಮತ್ತು ಇಂತಹವರ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಗೆ ತಕ್ಷಣವೆ ಮಾಹಿತಿಯನ್ನು ತಿಳಿಸಲು ವಿನಂತಿಸಿದೆ.

ಬೀಜ/ರಸಗೋಬ್ಬರ/ಕೀಟನಾಶಕ ಪರಿಕರಗಳನ್ನು ಪರವಾನಿಗೆ ಇರುವ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸತಕ್ಕದ್ದು , ಅವಧಿ ಮೀರಿದ ಯಾವುದೇ ಪರಿಕರಗಳನ್ನು ಖರೀದಿಸಬಾರದು. ಮತ್ತು ಇದರ ಜೊತೆಯಲ್ಲಿ ರಶೀದಿಯನ್ನು ಕಡ್ಡಾಯವಾಗಿ ಪಡೆಯಲು ವಿನಂತಿ.

ರಸಗೊಬ್ಬರ ಚೀಲದ ಮೇಲೆ ಮುದ್ರಿಸಿದ ದರಕ್ಕೆ ಮಾತ್ರ ಹಣ ಪಾವತಿ ಮಾಡತಕ್ಕದ್ದು , ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಲ್ಲಿ ಇಂತಹವರ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಗೆ ತಕ್ಷಣವೆ ಮಾಹಿತಿಯನ್ನು ತಿಳಿಸಲು ವಿನಂತಿಸಿದೆ.

ಕೃಷಿಗೆ ಸಂಬAಧಿಸಿದ ಯಾವುದೇ ತರಹದ ಮಾಹಿತಿ ಅವಶ್ಯಕವಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಗಳ / ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳಿಂದ ಪಡೆದುಕೊಳ್ಳಲು ವಿನಂತಿಸಿದೆ.
ರೈತ ಭಾಂಧವರು ಈ ಕೆಳಕಾಣ ಸಿದ ಮೋಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.

ಕ್ರಸಂ
ಅಧಿಕಾರಿ
ಮೋಬೈಲ್ ಸಂಖ್ಯೆ

ಸಹಾಯಕ ಕೃಷಿ ನಿದೇಶಕರು ಅಫಜಲಪೂರ
೮೨೭೭೯೩೧೫೧೦

ಸಹಾಯಕ ಕೃಷಿ ನಿದೇಶಕರು ಆಳಂದ
೮೨೭೭೯೩೧೫೧೨

ಸಹಾಯಕ ಕೃಷಿ ನಿದೇಶಕರು ಚಿಂಚೋಳಿ.
೮೨೭೭೯೩೧೫೧೪

ಸಹಾಯಕ ಕೃಷಿ ನಿದೇಶಕರು ಚಿತ್ತಾಪೂರ.
೮೨೭೭೯೩೧೫೧೭

ಸಹಾಯಕ ಕೃಷಿ ನಿದೇಶಕರು ಕಲಬುರ್ಗಿ
೮೨೭೭೯೩೧೫೦೮

ಸಹಾಯಕ ಕೃಷಿ ನಿದೇಶಕರು ಜೇವರ್ಗಿ
೮೨೭೭೯೩೧೫೧೯

ಸಹಾಯಕ ಕೃಷಿ ನಿದೇಶಕರು ಸೇಡಂ
೮೨೭೭೯೩೧೫೨೧

Latest Indian news

Popular Stories