ಕೋವಿಡ್ ಸಂಕಷ್ಟ : ವಿಶೇಷ ಪ್ಯಾಕೇಜ್ ಘೋಷಿಸಲು ಕೊಡಗು ಕಾಂಗ್ರೆಸ್ ಒತ್ತಾಯ

ಮಡಿಕೇರಿ ಮೇ ೧೩ : ಕೋವಿಡ್ ಲಾಕ್‌ಡೌನ್ ಮತ್ತು ಸೋಂಕಿನ ತೀವ್ರತೆಯಿಂದ ಬಡವರು ಹಾಗೂ ಕಾರ್ಮಿಕರು ಸಂಕಷ್ಟದ ಜೀವನ ಸಾಗಿಸುತ್ತಿದ್ದು, ತಕ್ಷಣ ರಾಜ್ಯ ಸರ್ಕಾರ ವಿಶೆಷ ಪ್ಯಾಕೇಜ್ ಘೋಷಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿಗಳು ಇಂದು ನಡೆಸಿದ ಸುದ್ದಿಗೋಷ್ಠಿಯ ಬಗ್ಗೆ ಇದ್ದ ನಿರೀಕ್ಷೆಗಳು ಹುಸಿಯಾಗಿದ್ದು, ಯಾವುದೇ ಪ್ಯಾಕೇಜ್ ಗಳನ್ನು ಘೋಷಿಸದೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಕೇವಲ ೫ ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡಿದ್ದಾರೆ ಅಷ್ಟೆ ಎಂದು ಟೀಕಿಸಿದ್ದಾರೆ.
ಕೋವಿಡ್ ಕರ್ಫ್ಯೂ, ಲಾಕ್‌ಡೌನ್, ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ, ಕಚೇರಿ, ಬ್ಯಾಂಕ್ ಗಳ ಕಾರ್ಯನಿರ್ವಹಣೆ, ಊಟ, ಉಪಹಾರ, ಮದ್ಯ ಪಾರ್ಸೆಲ್, ವಾಹನಗಳ ಸಂಚಾರ ಸೇರಿದಂತೆ ಎಲ್ಲಾ ವಿಚಾರದಲ್ಲೂ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಜನರಿಗೆ ಒಂದೆಡೆ ಕೋವಿಡ್ ಆತಂಕ, ಮತ್ತೊಂದೆಡೆ ಪೊಲೀಸರ ಭೀತಿ ಕಾಡುತ್ತಿದೆ. ಸ್ಪಷ್ಟತೆ ಇಲ್ಲದ ಮಾರ್ಗಸೂಚಿಗಳಿಂದ ಬಡವರು, ಕಾರ್ಮಿಕರು, ಆಟೋ ಚಾಲಕರು, ರಸ್ತೆ ಬದಿ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸುವಂತ್ತಾಗಿದೆ. ಈ ವರ್ಗ ಒಂದು ದಿನದ ಊಟಕ್ಕೂ ಪರದಾಡು ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಿಸಿ ನೆರವಿಗೆ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಒಂದು ವಾರ ಸರ್ಕಾರ ಏನು ಮಾಡಿದೆ ಎಂದು ವಿವರಿಸುವುದಕ್ಕಷ್ಟೇ ಸುದ್ದಿಗೋಷ್ಠಿ ಮೀಸಲಾಗಿತ್ತಲ್ಲದೆ ಸರ್ಕಾರದ ವೈಫಲ್ಯತೆ ಬಹಿರಂಗÀವಾಗಿದೆ ಎಂದು ಸುರೇಶ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಸಚಿವರುಗಳ ನಡುವೆ ಹೊಂದಾಣ ಕೆಯ ಕೊರತೆ ಎದ್ದು ಕಾಣುತ್ತಿದೆ. ಉಸ್ತುವಾರಿ ಸಚಿವರುಗಳು ಮುಖ್ಯಮಂತ್ರಿಗಳ ಆದೇಶಕ್ಕೆ ಬೆಲೆಯೇ ನೀಡುತ್ತಿಲ್ಲ, ಜಿಲ್ಲೆಯಲ್ಲೇ ವಾಸ್ತವ್ಯ ಹೂಡಬೇಕೆಂದು ಸೂಚಿಸಿದ್ದರೂ ಕೊಡಗಿನ ಉಸ್ತುವಾರಿ ಸಚಿವರು ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಟೀಕಿಸಿದ್ದಾರೆ.
ರೈತರು ಬೆಳೆದ ಬೆಳೆಗಳು ಕೊಳೆತು ಹೋಗುತ್ತಿವೆ, ಸಣ್ಣ ಉದ್ದಿಮೆಗಳು ನೆಲಕಚ್ಚಿವೆ, ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ರಾಜ್ಯ ವ್ಯಾಪಿ ಕಾರ್ಮಿಕರು ಕೂಲಿ ಇಲ್ಲದೆ ಊಟಕ್ಕಾಗಿ ಪರದಾಡುತ್ತಿದ್ದಾರೆ. ಪ್ರತಿದಿನ ಸಾವಿರಾರು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯಕೀಯ ವ್ಯವಸ್ಥೆಯ ವೈಫಲ್ಯದಿಂದ ೪೦೦ ರಿಂದ ೫೦೦ ಮಂದಿ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯ ವ್ಯವಸ್ಥೆಯ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತ ಇಲ್ಲದಾಗಿದೆ. ಇದೆಲ್ಲವನ್ನು ಗಮನಿಸಿದರೆ ರಾಜ್ಯ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ವೈಫಲ್ಯವಾಗಿರುವುದು ಸಾಬೀತಾಗಿದೆ ಎಂದು ಆರೋಪಿಸಿರುವ ಸುರೇಶ್, ರಾಜ್ಯದಲ್ಲಿ ರಾಷ್ಟçಪತಿ ಆಡಳಿತ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಫೋಟೋ :: ಸುರೇಶ್

Latest Indian news

Popular Stories