ಬೆಂಗಳೂರಿನ ಕೊಡಗು ಗೌಡ ಸಮಾಜದಿಂದ ೫ ಲಕ್ಷ ರೂ. ಮೌಲ್ಯದ ಕೊಡುಗೆ

ಮಡಿಕೇರಿ ಮೇ ೨೯ : ಬೆಂಗಳೂರಿನ ಕೊಡಗು ಗೌಡ ಸಮಾಜದ ವತಿಯಿಂದ ನಗರದ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ೫ ಲಕ್ಷ ರೂ. ಮೌಲ್ಯದ ಡ್ರೆöÊ ಫ್ರೂಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಗುಪ್ತ ದಳದ ವೃತ್ತ ನಿರೀಕ್ಷಕ ಮೇದಪ್ಪ ಅವರುಗಳಿಗೆ ಡ್ರೆöÊಫ್ರೂಟ್‌ಗಳನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ, ಕೊಡಗು ಜಿಲ್ಲೆಯಲ್ಲಿಯೂ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿದ್ದು, ಅದರ ನಿಯಂತ್ರಣಕ್ಕೆ ಕೋವಿಡ್ ಫ್ರಂಟ್ ಲೈನ್ ವಾರಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕೊಡಗು ಗೌಡ ಸಮಾಜ ಜಿಲ್ಲೆಗೆ ತನ್ನ ಸೇವೆಗಾಗಿ ಒಟ್ಟು ೫ ಲಕ್ಷ ರೂ. ಮೌಲ್ಯದ ಡ್ರೆöÊ ಫ್ರೂಟ್‌ಗಳನ್ನು ವಿತರಿಸಿದೆ. ಮುಂದೆಯೂ ಅಗತ್ಯ ಸೇವೆ ನೀಡುವುದಾಗಿ ಕೇಕಡ ನಾಣಯ್ಯ ಹೇಳಿದರು. ಈ ಸಂದರ್ಭ ಬೆಂಗಳೂರು ಕೊಡಗು ಗೌಡ ಸಮಾಜದ ಸದಸ್ಯರು ಮತ್ತು ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು. ಫೋಟೋ :: ಕೊಡಗು ಗೌಡ

Latest Indian news

Popular Stories

error: Content is protected !!