೧೨ ಆಸ್ಪತ್ರೆಗಳಿಗೆ ೨.೪೦ ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳ ನೆರವು

ಮಡಿಕೇರಿ ಜೂ.೧ : ಅಮೆರಿಕಾದ ಆರೋಗ್ಯ ಸಚಿವಾಲಯದ ಪ್ರಮುಖ ಹುದ್ದೆಯಲ್ಲಿರುವ ಕನ್ನಡ ನಾಡಿನ ಡಾ.ವಿವೇಕ್ ಮೂರ್ತಿ ಮಡಿಕೇರಿ ಸೇರಿದಂತೆ ರಾಜ್ಯದ ೧೨ ಆಸ್ಪತ್ರೆಗಳಿಗೆ ೨.೪೦ ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳ ನೆರವು ನೀಡಲು ಮುಂದಾಗಿದ್ದಾರೆ. ಅಮೆರಿಕಾದ ಆರೋಗ್ಯ ಸಚಿವಾಲಯದಲ್ಲಿ ವೈಸ್ ಅಡ್ಮಿರಲ್ ನಂತಹ ಪ್ರಮುಖ ಹುದ್ದೆ ಹೊಂದಿರುವ ಭಾರತೀಯ ಸಂಜಾತ ವಿವೇಕ್ ಮೂರ್ತಿ ಕೋವಿಡ್ ಹಿನ್ನಲೆಯಲ್ಲಿ ತಾಯ್ನಾಡಿನ ಆಸ್ಪತ್ರೆಗಳಿಗೆ ಅಗತ್ಯ ನೆರವಿನ ಹಸ್ತ ಚಾಚಿದ್ದಾರೆ.

Dr VIVEK Madikeri
Dr. Vivek Murthy of Kannada Nadu


ಮೂಲತ: ಮಂಡ್ಯ ಜಿಲ್ಲೆಯ ಅಲ್ಲಗೆರ ಗ್ರಾಮದವರಾದ ಲಕ್ಷ್ಮೀ ನರಸಿಂಹಮೂರ್ತಿ ಅವರ ಪುತ್ರ ವಿವೇಕ್ ಮೂರ್ತಿ ಅಮೆರಿಕಾ ದೇಶದ ಸಾರ್ವಜನಿಕ ಆರೋಗ್ಯ ಸಚಿವಾಲಯದ ಮುಖ್ಯಸ್ಥರಾಗಿದ್ದಾರೆ. ಅಮೇರಿಕಾದಲ್ಲಿ ಒಬಾಮ ಸರ್ಕಾರ ಇದ್ದಾಗಲೇ ಡಾ.ವಿವೇಕ್ ಮೂರ್ತಿ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು. ವಿವೇಕ್ ವೃತ್ತಿ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದ್ದ ಅಮೆರಿಕಾದ ನೂತನ ಅಧ್ಯಕ್ಷ ಬಿಡೆನ್ ಕೂಡ ವಿವೇಕ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಿದ್ದಾರೆ.


ಸಾಮಾಜಿಕ ಸೇವಾ ಉದ್ದೇಶದ ತಮ್ಮ ಸಂಸ್ಥೆಯಾದ ಸ್ಕೋಪ್ ಮೂಲಕ ಇದೀಗ ಭಾರತದ ಕೆಲವು ಸಣ್ಣ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿರುವ ಡಾ. ವಿವೇಕ್ ಮೂರ್ತಿ ಇದಕ್ಕಾಗಿ ಮಡಿಕೇರಿ, ಮಂಡ್ಯ, ಮಳವಳ್ಳಿ, ಮದ್ದೂರು, ನಾಗಮಂಗಲ ಸೇರಿದಂತೆ ರಾಜ್ಯದ ೧೨ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಆಸ್ಪತ್ರೆಗಳಿಗೆ ೭೦ ಆಕ್ಸಿಜನ್ ಉಪಕರಣ, ೪ ವೆಂಟಿಲೇಟರ್, ಅತ್ಯುತ್ತಮ ಗುಣಮಟ್ಟದ ಮಾಸ್ಕ್, ವೈದ್ಯಕೀಯ ಉಪಕರಣಗಳನ್ನು ನೀಡಲಿದ್ದಾರೆ. ೧೨ ಆಸ್ಪತ್ರೆಗಳಿಗೆ ಸ್ಕೋಪ್ ಫೌಂಡೇಶನ್ ವಿನಿಯೋಗಿಸಲಿರುವ ಮೊತ್ತವೇ ೨.೪೦ ಕೋಟಿ ರೂ.ಗಳಾಗಿದ್ದು, ಈಗಾಗಲೇ ಈ ಸಾಮಾಗ್ರಿಗಳು ಬೆಂಗಳೂರು ತಲುಪಿದೆ. ಸದ್ಯದಲ್ಲಿಯೇ ಮಡಿಕೇರಿ ಕೋವಿಡ್ ಆಸ್ಪತ್ರೆಗೂ ಅಗತ್ಯ ವೈದ್ಯಕೀಯ ಉಪಕರಣಗಳು ವಿತರಣೆಯಾಗಲಿದೆ ಎಂದು ವಿವೇಕ್ ತಂದೆ ಲಕ್ಷಿ÷್ಮÃ ನರಸಿಂಹಮೂರ್ತಿ ತಿಳಿಸಿದ್ದಾರೆ.
ಇಷ್ಟಕ್ಕೆ ವಿವೇಕ್ ಕೊಡುಗೆ ಮುಕ್ತಾಯವಾಗಿಲ್ಲ. ಇನ್ನೂ ೭೦ ಲಕ್ಷ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳನ್ನು ರಾಜ್ಯದ ಆಯ್ದ ಮತ್ತು ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅನೇಕ ಆಸ್ಪತ್ರೆಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದ್ದು, ಮೊದಲ ಹಂತದಲ್ಲಿ ಇಂತಹ ಸಣ್ಣ ಆಸ್ಪತ್ರೆಗಳಿಗೆ ನೆರವಿನ ಕೊಡುಗೆ ನೀಡಲು ವಿವೇಕ್ ಮೂರ್ತಿ ಮತ್ತು ಸ್ಕೋಪ್ ತಂಡ ಆಯ್ಕೆ ಮಾಡಿಕೊಂಡಿದೆ.
ವಿಶ್ವದ ಅಗ್ರಗಣ್ಯ ದೇಶದಲ್ಲಿನ ಪ್ರಮುಖ ಹುದ್ದೆಯಲ್ಲಿದ್ದರೂ ತನ್ನ ಹುಟ್ಟೂರು ಮತ್ತು ಕನ್ನಡನಾಡನ್ನು ಮರೆಯದೇ ತಾಯ್ನಾಡಿಗಾಗಿ ಅಮೆರಿಕಾದಿಂದ ಮಹತ್ವದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡುತ್ತಿರುವ ಡಾ.ವಿವೇಕ್ ಮೂರ್ತಿ ಅವರ ಸೇವಾ ಕೊಡುಗೆಗಳಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಫೋಟೋ :: ವಿವೇಕ್, ಹಾಸ್ಪಿಟಲ್

Latest Indian news

Popular Stories

error: Content is protected !!