ಅಪಘಾತದ ಸಂದರ್ಭ ಚಿನ್ನಾಭರಣ ದೋಚಿದ್ದ ಸುಂಟಿಕೊಪ್ಪದ ಆರೋಪಿಗಳ ಬಂಧನ

ಮಡಿಕೇರಿ ತಾಲ್ಲೂಕು ಸಿಂಕೋನ ಎಸ್ಟೇಟ್ ಬಳಿ ಹೆದ್ದಾರಿ ರಸ್ತೆಯಲ್ಲಿ ನಡೆದಿದ್ದ ರಸ್ತೆ ಅಪಘಾತ ಸಂದರ್ಭ ಕಾರುಚಾಲಕರ ನಡುವೆ ವಾಗ್ವಾದವಾಗುವಾಗ ಹಲ್ಲೆ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

      ದಿನಾಂಕ 25-07-2021 ರಂದು ಮಡಿಕೇರಿ ತಾಲ್ಲೂಕು  ಮೊಣ್ಣಂಗೇರಿ  ಗ್ರಾಮದ ನಿವಾಸಿ  ಪೊನ್ನಪ್ಪ ಎಂಬುವವರು  ಕುಟುಂಬ ಸಮೇತ  ಅವರ ಎಪಿ-09-ಎಎಕ್ಸ್-3526 ರ ಸಂಖ್ಯೆಯ ಲ್ಯಾನ್ಸರ್ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಸಿಂಕೋನಾ ತೋಟದ ಬಳಿ ಹಿಂಬದಿಯಿಂದ ಕೆಎ-03-ಎಂಎಸ್-7918 ರ ಡಸ್ಟರ್ ಕಾರು ಡಿಕ್ಕಿ ಪಡಿಸಿದ್ದರಿಂದ  ಕಾರು ಜಖಂಗೊಂಡಿದ್ದು ಈ ಬಗ್ಗೆ ಡಸ್ಟರ್ ಕಾರಿನ ಚಾಲಕ ಅತೀವೇಗದಿಂದ ಕಾರು ಚಾಲನೆ ಮಾಡಿದ ಕಾರಣ ಅಪಘಾತವಾಗಿರುವುದಾಗಿ ಮನವರಿಕೆ ಮಾಡುತ್ತಿರುವಾಗ ಡಸ್ಟರ್ ಕಾರಿನ ಚಾಲಕನು ಅವಾಚ್ಯವಾಗಿ ಬೈದು 20 ನಿಮಿಷದ ಅವದಿಯಲ್ಲಿ ಏಕಾ ಏಕಿ ಸುಮಾರು ಹತ್ತು ಜನರು ಗುಂಪು ಸೇರಿಸಿ ಪೊನ್ನಪ್ಪ ರವರ ಕುಟುಂಬದವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಗಾಯಪಡಿಸಿದ್ದು, ಹಲ್ಲೆ ಮಾಡಿದ ವ್ಯಕ್ತಿಗಳು ಪೊನ್ನಪ್ಪ ರವರ ಮಕ್ಕಳು ಧರಿಸಿದ್ದ ಎರಡು ಚಿನ್ನದ ಸರ ಹಾಗೂ ಉಂಗುರುವನ್ನು ಕದ್ದೊಯ್ದ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ದಿನಾಂಕ 26-07-2021 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ 1) ಹೆಚ್.ಯು.ರಫೀಕ್ ಖಾನ್ ತಂದೆ ಉಸ್ಮಾನ್, ಪ್ರಾಯ 42 ವರ್ಷ, ಸುಂಟಿಕೊಪ್ಪ, 2) ಆರ್.ಹೆಚ್.ನಾಸಿರ್ ತಂದೆ ಹಸನ್, 34 ವರ್ಷ, ಸುಂಟಿಕೊಪ್ಪ. 3) ಹೆಚ್.ಯು.ಇಸಾಕ್ ತಂದೆ ಉಸ್ಮಾನ್, ಪ್ರಾಯ 40 ವರ್ಷ, ಸುಂಟಿಕೊಪ್ಪ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿರುತ್ತದೆ
ಈ ಪ್ರಕರಣದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಎಸ್. ರವಿಕಿರಣ್, ಪಿ.ಎಸ್.ಐ ಎಂ.ಕೆ. ಸದಾಶಿವ, ಮತ್ತು ಠಾಣಾ ಸಿಬ್ಬಂದಿಯವರಾದ ಹೆಚ್.ಡಿ.ಪ್ರಸನ್ನ ಕುಮಾರ್, ಕೆ.ಕೆ. ಶಶಿಧರ್, ಕೆ.ಜಿ.ರವಿಕುಮಾರ್, ಟಿ.ಆರ್.ದಿನೇಶ್, ದಿನೇಶ್.ಕೆ.ಡಿ, ಸೋಮಶೇಖರ್ ಸಜ್ಜನ್, ಜಿ.ಎಸ್.ಅನಿಲ್, ಮಾದಯ್ಯ, ಸಿದ್ದರಾಮ ವಂದಲ, ಅಂತೋಣಿ ಐ.ಜೆ, ಎಂ.ಡಿ. ಸೋಮಶೇಖರ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

Latest Indian news

Popular Stories

error: Content is protected !!