ಕಾಂಗ್ರೆಸ್ ಬಲವರ್ಧನೆಗೆ ಎಲ್ಲರ ಸಹಕಾರ ಅಗತ್ಯ : ನೂತನ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ

ಮಡಿಕೇರಿ ಮೇ ೩೦ : ಕೊಡಗಿನಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಎಲ್ಲರ ಸಹಕಾರ ಅಗತ್ಯವೆಂದು ಜಿಲ್ಲಾ ಕಾಂಗ್ರೆಸ್ ನ ನೂತನ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು.
ಕಾರ್ಯಾಧ್ಯಕ್ಷರಾಗಿ ನೇಮಕವಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು ಪಕ್ಷದ ಬಲವರ್ಧನೆ ಕುರಿತು ವಿಶ್ವಾಸದ ಮಾತುಗಳನ್ನಾಡಿದರು.
ಇದೇ ಸಂದರ್ಭ ಧರ್ಮಜ ಉತ್ತಪ್ಪ ಅವರು ಕೆಪಿಸಿಸಿಯ ಉಚಿತ ಆಂಬುಲೆನ್ಸ್ ಸೇವೆಯಾದ “ಕಾಂಗ್ರೆಸ್ ಕೇರ್ಸ್” ಸೇವೆಗೆ ಚಾಲನೆ ನೀಡಿದರು. ಯುವ ಕಾಂಗ್ರೆಸ್ ನ ರಾಜ್ಯ ಮುಖಂಡ ಮಹಮ್ಮದ್ ನಲಪಾಡ್ ನೇತೃತ್ವದ ಆಂಬುಲೆನ್ಸ್ ಸೇವೆ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹನಿಫ್ ಸಂಪಾಜೆ ಅವರ ಉಸ್ತುವಾರಿಯಲ್ಲಿ ಆರಂಭಗೊAಡಿತು.
ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾಅಚ್ಚಯ್ಯ, ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ, ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಮಾಜಿ ಕಾರ್ಯದರ್ಶಿ ಜೆ.ಜಿ.ಕಾವೇರಪ್ಪ, ಪ್ರಮುಖರಾದ ಟಿ.ಎಂ.ಶಾಹಿದ್, ಸುಜು ತಿಮ್ಮಯ್ಯ, ಆರ್.ಕೆ.ಸಲಾಂ, ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷÀ ಮೈಸಿ, ಸಾಮಾಜಿಕ ಜಾಲತಾಣದ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಬ್ಲಾಕ್ ಅಧ್ಯಕ್ಷರುಗಳಾದ ಇಸ್ಮಾಯಿಲ್, ಮೀದೇರಿರ ನವೀನ್, ಅಬ್ದುಲ್ ರಜಾಕ್, ಖಲೀಲ್ ಭಾಷಾ, ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಹೆಚ್.ಎಂ.ನAದಕುಮಾರ್, ಟಾಟು ಮೊನ್ನಪ್ಪ, ಬಾನಂಡ ಪೃಥ್ವಿ, ಶರೀಫ್ ಇಬ್ರಾಹಿಂ, ತೆನ್ನಿರಾ ಮೈನಾ, ಸದಾ ಮುದ್ದಪ್ಪ, ಮುದ್ದುರಾಜು ಮತ್ತಿತರರು ಹಾಜರಿದ್ದರು. ಫೋಟೋ :: ಕಾಂಗ್ರೆಸ್

Latest Indian news

Popular Stories

error: Content is protected !!