ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಾ ಸಭೆ

ಮಡಿಕೇರಿ ಮೇ ೩೦ : ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರು, ಕಾನೂರು, ನಾಲ್ಕೇರಿ, ನಿಟ್ಟೂರು, ಬಾಳಲೆ, ಪೊನ್ನಪ್ಪಸಂತೆ, ಮಾಯಮುಡಿ, ತಿತಿಮತಿ ಮತ್ತು ದೇವರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ನಿಯಂತ್ರಣ ಸಂಬAಧ ಆಯಾಯ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಸಮಾಲೋಚನಾ ಸಭೆ ನಡೆಸಿದರು.
ಕೋವಿಡ್-೧೯ ಮಹಾಮಾರಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು. ಹಾಗೆಯೇ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಸಕರು ನಿರ್ದೇಶನ ನೀಡಿದರು.
ತಹಶೀಲ್ದಾರ್ ಯೋಗಾನಂದ, ತಾ.ಪಂ.ಆಡಳಿತಧಿಕಾರಿ, ತಾ.ಪಂ.ಇಒ, ತಾಲ್ಲೂಕು ವೈದ್ಯಧಿಕಾರಿ, ನೋಡಲ್ ಅಧಿಕಾರಿ, ಪೊಲೀಸ್ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೋವಿಡ್ ಜಾಗೃತಿ ಸಮಿತಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಇತರರು ಇದ್ದರು.
ಆರೋಗ್ಯ ಪರೀಕ್ಷಾ ಕಿಟ್ ವಿತರಣೆ: ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಆರೋಗ್ಯ ಪರೀಕ್ಷಾ ಕಿಟ್ ವಿತರಿಸಿದರು. ತಹಶೀಲ್ದಾರ ಯೋಗಾನಂದ, ಟಿಎಚ್‌ಒ ಡಾ.ಯತಿರಾಜ ಇತರರು ಇದ್ದರು. ಫೋಟೋ :: ಎಂಎಲ್‌ಎ

Latest Indian news

Popular Stories