ಅಕ್ರಮ ಗಾಂಜಾ ಪ್ರಕರಣ ಪತ್ತೆ, ಆರೋಪಿ ಬಂಧನ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಐವತ್ತೊಕ್ಲು ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಪ್ರಕರಣವನ್ನು ಭಾಗಮಂಡಲ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಐವತ್ತೊಕ್ಲು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಭಾಗಮಂಡಲ ಠಾಣಾ ಪಿಎಸ್ಐರವರ ನೇತೃತ್ವದ ತಂಡವು ಆರೋಪಿ ಐವತೊಕ್ಲು ಗ್ರಾಮದ ನಿವಾಸಿ ಪಿ.ಎಸ್. ವಿಜಯ ಮೇದಪ್ಪ ಎಂಬುವವರನ್ನು ವಶಕ್ಕೆ ಪಡೆದು ಸುಮಾರು 1680 ಗ್ರಾಂ ತೂಕದ ಒಟ್ಟು ರೂ.23,000/- ಮೌಲ್ಯದ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿರುತ್ತಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಮಂಡಲ ಠಾಣಾ ಪಿಎಸ್ಐ ಹೆಚ್.ಕೆ. ಮಹದೇವ್ ಸಿಬ್ಬಂದಿಯವರಾದ ಶಿವರಾಮ್ ಎಂ.ಬಿ, ನಂಜುಂಡ ಎನ್.ಕೆ, ಇಬ್ರಾಹಿಂ, ಮಹೇಶ್, ಸುರೇಶ್ ಕುಮಾರ್, ಪುನೀತ್ ಕುಮಾರ್ .ಎನ್.ಆರ್, ಮಹದೇವಸ್ವಾಮಿ ರವರು ಪಾಲ್ಗೊಂಡಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ

Latest Indian news

Popular Stories