ತೆರಿಗೆ ತೆಕ್ಕೊಳ್ಳಿ, ಶಿಕ್ಷಣ, ಆರೋಗ್ಯ ಸೇವೆ ಉಚಿತವಾಗಿ ನೀಡಿ ಅಭಿಯಾನ

ಮಡಿಕೇರಿ ಜೂ.೮ : “ತೆರಿಗೆ ಬೇಕಿದ್ರೆ ತೆಕ್ಕೊಳ್ಳಿ, ಆದ್ರೆ ಶಿಕ್ಷಣ, ಆರೋಗ್ಯ ಸೇವೆ ಉಚಿತವಾಗಿ ನೀಡಿ” ಅಭಿಯಾನ ಕೊಡಗು ಜಿಲ್ಲೆಯಲ್ಲೂ ನಡೆಯಿತು.
ಭಾರತೀಯ ಪರಿವರ್ತನಾ ಸಂಘದ ವತಿಯಿಂದ ರಾಜ್ಯವ್ಯಾಪಿ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಪ್ರಮುಖರಾದ ಮೋಹನ್ ಮೌರ್ಯ, ಶರತ್ ಶಾಕ್ಯ ಮತ್ತಿತರರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಿತು.
ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುವಂತೆ ಒತ್ತಾಯಿಸಿ ಮನೆ ಮನೆಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕೆಂದು ತಿಳಿಸಿದ ಪ್ರಮುಖರು, ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡಿದರೆ ಲಕ್ಷಾಂತರ ಬಡ ಜೀವಗಳ ರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಫೋಟೋಗಳಿವೆ

Latest Indian news

Popular Stories

error: Content is protected !!