ಕೊಡಗು ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಸಾಮಾಜಿಕ ಕಳಕಳಿ

ಮಡಿಕೇರಿ ಜೂ.೪ : ಜಿಲ್ಲಾ ಯುವ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷರೊಬ್ಬರು ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಕ್ಷ ಸಂಘಟನೆಯೊAದಿಗೆ ಜನರ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಉಪಾಧ್ಯಕ್ಷ ಮೈಸಿ ಕತ್ತÀಣ ರ ಅವರು ರಾಜ್ಯ ಯುವ ಕಾಂಗ್ರೆಸ್ ಘಟಕ ನೀಡಿರುವ ಆಂಬ್ಯುಲೆನ್ಸ್ ಮೂಲಕ ಕೋವಿಡ್ ಸೋಂಕಿತರ ನೆರವಿಗೆ ಬಂದಿದ್ದಾರೆ. ಕಳೆದ ವರ್ಷದಿಂದಲೇ ನೊಂದವರ ನೆರವಿಗೆ ಬಂದಿದ್ದ ಇವರು ಜಿಲ್ಲೆಯ ವಿವಿಧೆಡೆಯ ರೋಗಿಗಳನ್ನು ಆಯಾ ಭಾಗದ ಆಸ್ಪತ್ರೆಗಳಿಗೆ ದಾಖಲಿಸಿ ನೆರವು ನೀಡುವಲ್ಲಿ ಸಹಕರಿಸಿದ್ದಾರೆ.
ಪ್ರಸ್ತುತ ಯುವ ಕಾಂಗ್ರೆಸ್ ಘಟಕ ನೀಡಿರುವ ಆಂಬ್ಯುಲೆನ್ಸ್ ಮೂಲಕ ದಿನದ ೨೪ ಗಂಟೆಯೂ ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯದಲ್ಲಿ ತೊಂಡಗಿಸಿಕೊAಡಿದ್ದಾರೆ. ಇವರ ಜನಪರ ಕಾಳಜಿಯ ಬಗ್ಗೆ ಮೈಸಿ ಕತ್ತÀಣ ರ ಸ್ನೇಹಿತರ ಬಳಗ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ಜೊತೆಗೂಡಿ ಜನಸೇವೆಯಲ್ಲಿ ತೊಡಗಿದ್ದಾರೆ. ತುರ್ತಾಗಿ ಆಂಬ್ಯುಲೆನ್ಸ್ ಸೇವೆ ಬೇಕಿದ್ದಲ್ಲಿ ಯಾವುದೇ ಸಮಯದಲ್ಲಿ ೯೦೦೮೧ ೪೨೬೯೩ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸಿ ಕತ್ತÀಣ ರ ತಿಳಿಸಿದ್ದಾರೆ. ಫೋಟೋ :: ಮೈಸಿ

Latest Indian news

Popular Stories

error: Content is protected !!