ಜೂ. 16 ರಿಂದ ನರಿಯಂದಡ-1 ನೇ ಗ್ರಾಮ ಲಾಕ್‍ಡೌನ್

ಮಡಿಕೇರಿ ಜೂ.14(ಕರ್ನಾಟಕ ವಾರ್ತೆ):-ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-1ನೇ ಗ್ರಾಮದಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ 16ರ ಮಧ್ಯಾಹ್ನ 1 ಗಂಟೆಯಿಂದ ಜೂನ್ 24ರ ಸಂಜೆ 6 ಗಂಟೆಯವರೆಗೆ ನರಿಯಂದಡ-1 ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದ್ದು ಸಾರ್ವಜನಿಕರು ಸಹಕರಿಸಲು ಕೋರಿದ್ದಾರೆ.
ಈ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ, ಯಾರೂ ಅನಾವಶ್ಯಕವಾಗಿ ತಿರುಗಾಡದಂತೆ, ಅನಾವಶ್ಯಕವಾಗಿ ವಾಹನಗಳು ತಿರುಗಾಡಿದರೆ ವಾಹನಗಳನ್ನು ಜಪ್ತಿ ಮಾಡಿ ಪೋಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಹಾಗೂ ಸಾರ್ವಜನಿಕರು ತಿರುಗಾಡಿದರೆ ಇವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು.
ಹೊರಗಡೆಯಿಂದ ಯಾವುದೇ ಕಾರ್ಮಿಕರು ಗ್ರಾಮದೊಳಗೆ ಪ್ರವೇಶಿಸದಂತೆ, ಅಂಗಡಿ ಮಾಲೀಕರು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದಲ್ಲಿ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ನರಿಯಂದಡ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಆದ್ದರಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿಯೊಂದಿಗೆ ಕೋವಿಡ್-19ನ್ನು ತಡೆಗಟ್ಟಲು ಕೈ ಜೋಡಿಸುವಂತೆ ನರಿಯಂದಡ ಗ್ರಾಮ ಪಂಚಾಯತಿ ಪಿಡಿಒ ಅವರು ಕೋರಿದ್ದಾರೆ.

Latest Indian news

Popular Stories

error: Content is protected !!