SKSSF ಕೊಡಗು ವತಿಯಿಂದ ಅಗಲಿದ ನೇತಾರರ ಹಾಗೂ ಕಾರ್ಯಕರ್ತರ ಅನುಸ್ಮರಣಾ ಕಾರ್ಯಕ್ರಮ

SKSSF ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಕೋರೋನ ಸಾಂಕ್ರಾಮಿಕ ರೋಗದಿಂದ ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ನೇತಾರರ ಹಾಗೂ ಕಾರ್ಯಕರ್ತರುಗಳ ಅನುಸ್ಮರಣೆ ಹಾಗೂ ಅವರ ಹೆಸರಿನಲ್ಲಿ ವಿಶೇಷ ಪ್ರಾರ್ಥನಾ ಸಂಗಮ ಆನ್ಲೈನ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಗೆ ನೇತೃತ್ವ ವಹಿಸಿ ಉಪದೇಶ ನೀಡಿದ ಸಮಸ್ತ ಕೇಂದ್ರ ಸಮಿತಿ ಸದಸ್ಯರು , ಕೊಡಗು ಜಿಲ್ಲಾ ಉಪ ಖಾಝಿಯೂ ಆದ ಶೈಖುನಾ ಅಬುಲ್ಲಾ ಫೈಝಿ, ಕೋರೋನ ಸಾಂಕ್ರಾಮಿಕ ರೋಗ ಗ್ರಾಮೀಣ ಮಟ್ಟದಲ್ಲಿ ಸಹ ತನ್ನ ರಣಕೇಕೆ ಮುಂದುವರಿಸಿದ ಈ ಸಂದರ್ಭದಲ್ಲಿ ಜನರು ಹೆಚ್ಚಿನ ಜಾಗರೂಕತೆ ವಹಿಸಬೇಕು, ಈ ರೋಗದಿಂದಾಗಿ ಅದೆಷ್ಟೋ ವ್ಯಕ್ತಿಗಳು ನಮ್ಮಿಂದ ಕಣ್ಮರೆಯಾದರು. ಇಂತಹ ಸಂದಿಗ್ಧ ಕಾಲದಲ್ಲಿ ಎಲ್ಲರೂ ಪ್ರತ್ಯೇಕವಾಗಿ ಪ್ರಾರ್ಥಿಸಲು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ SKSSF ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ನೆರವಾಗುವಂತೆ ತಿಳಿಸಿದ ಅವರು ಈ ರೋಗ ಕಾರಣ ಮರಣವನ್ನಪ್ಪಿದ ಯುವ ಜನತೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಕೊಡಗು ಜಿಲ್ಲಾ ಅಧ್ಯಕ್ಷರಾದ ತಮ್ಲೀಕ್ ದಾರಿಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ SKSSF ಕರ್ನಾಟಕ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ, ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಭಾಗವಹಿಸಿದ್ದರು. SKSSF ಕೊಡಗು ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಹಾಜಿ ಕೊಡ್ಲಿಪೇಟೆ ಕಾರ್ಯಕ್ರಮಕ್ಕೆ ಹಿತನುಡಿಗಳೊಂದಿಗೆ ಶುಭ ಕೋರಿದರು.

ಕೊಡಗು ಜಿಲ್ಲಾ ಸಮಿತಿಯ ನಾಯಕರುಗಳು,ಅಧೀನ ಸಮಿತಿಯ ನೇತಾರರು, ಜಿಲ್ಲೆಯ ಹಲವು ಭಾಗಗಳ ಕಾರ್ಯಕರ್ತರುಗಳು, ಜಿಸಿಸಿ ರಾಷ್ಟ್ರಗಳಲ್ಲಿನ ಸಮಿತಿಯ ಸದಸ್ಯರುಗಳು ಆನ್ಲೈನ್ ನಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಸ್ವಾಗತಿಸಿ ಸಿದ್ದೀಕ್ ವಾಫಿ ವಂದಿಸಿದರು. ಜಂಶೀರ್ ವಾಫಿ ಕಾರ್ಯಕ್ರಮವನ್ನು ನಿರೂಪಿಸಿದರು.

Latest Indian news

Popular Stories

error: Content is protected !!