ಹಿಂದಿನ ನೇಮಕಾತಿಗಳೆಲ್ಲವೂ ಅನೂರ್ಜಿತಗೊಂಡಿದೆ : ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಸ್ಪಷ್ಟನೆ

ಮಡಿಕೇರಿ ಮೇ ೩೧ : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಈಗಾಗಲೇ ಕೆಪಿಸಿಸಿ ವಿಸರ್ಜಿಸಿದ್ದು, ನೂತನ ಸಮಿತಿಗಳು ರಚನೆಯಾಗಬೇಕಷ್ಟೆ. ಈ ಹಿಂದಿನ ಜಿಲ್ಲಾಧ್ಯಕ್ಷರು ವಿವಿಧ ಘಟಕಗಳಿಗೆ ಕೆಲವರನ್ನು ನೇಮಕಾತಿ ಮಾಡಿದ್ದು, ಇದು ಕೂಡ ಅನೂರ್ಜಿತಗೊಂಡಿರುತ್ತದೆ ಎಂದು ನೂತನ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದಿನ ಅಧ್ಯಕ್ಷರು ಹೊರಡಿಸಿರುವ ನೇಮಕಾತಿ ಆದೇಶಗಳನ್ನು ಯಾರೂ ಪತ್ರಿಕೆಗೆ ಬಿಡುಗಡೆ ಮಾಡಬಾರದೆಂದು ಮನವಿ ಮಾಡಿದ್ದಾರೆ.
ನೂತನ ಸಮಿತಿ ರಚನೆಯಾಗುವಲ್ಲಿಯವರೆಗೆ ಎಲ್ಲರು ಸಹಕರಿಸುವಂತೆ ಕೋರಿದ್ದಾರೆ. ಫೋಟೋ :: ಧರ್ಮಜ ಉತ್ತಪ್ಪ

Latest Indian news

Popular Stories

error: Content is protected !!