ತೋಟದ ಮಾಲೀಕರೇ ಕಾಡಾನೆಗಳಿಗೆ ಹಲಸಿನ ಹಣ್ಣುಗಳನ್ನು ನೀಡಿದರು

ಮಡಿಕೇರಿ ಜೂ.೧ : ಅರಣ್ಯ ಪ್ರದೇಶದಲ್ಲಿ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಅಭ್ಯತ್ ಮಂಗಲದ ಸುತ್ತಮುತ್ತಲ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಗಿಡ, ಮರಗಳಿಗೆ ಹಾನಿ ಮಾಡುತ್ತಿವೆ.
ಕಳೆದ ಒಂದು ತಿಂಗಳಿನಿAದ ಈ ಭಾಗದ ಹಲವು ತೋಟಗಳಲ್ಲಿ ಹಲಸು ಹಣ್ಣಾಗಿ ಘಮಘಮಿಸುತ್ತಿದೆ. ಇದನ್ನು ಸವಿಯಲೆಂದು ಕಾಡಾನೆಗಳ ಹಿಂಡು ತೋಟಗಳಲ್ಲಿ ಬೀಡು ಬಿಡುತ್ತಿವೆ. ನಷ್ಟದಿಂದ ಬೇಸತ್ತಿರುವ ತೋಟದ ಮಾಲೀಕರುಗಳು ಹಲಸಿನ ಮರಗಳಲ್ಲಿದ್ದ ಹಣ್ಣುಗಳನ್ನೆಲ್ಲ ಕಾರ್ಮಿಕರಿಂದ ಕೀಳಿಸಿ ರಸ್ತೆ ಬದಿ ರಾಶಿ ಹಾಕಿದ್ದಾರೆ. ಆನೆಗಳು ಬಂದು ಇಲ್ಲಿಯೇ ತಿನ್ನಲಿ, ತೋಟಗಳಿಗೆ ನುಗ್ಗುವುದು ಬೇಡ ಎನ್ನುವ ಅಭಿಪ್ರಾಯ ಮಾಲೀಕರುಗಳದ್ದು. ಆದರೆ ರಸ್ತೆಯಲ್ಲಿ ಕಾಡಾನೆಗಳು ಹಲಸಿನ ಹಣ್ಣು ತಿನ್ನುತ್ತಾ ನಿಂತು ಬಿಟ್ಟರೆ ದಾರಿಹೋಕರಿಗೆ ಅಪಾಯ ಎದುರಾಗಲಿದೆ ಎನ್ನುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
::: ಅಭಿಪ್ರಾಯ :::
ವರ್ಷಪೂರ್ತಿ ಕಾಡಾನೆಗಳ ಹಾವಳಿ ಇರುತ್ತದೆ, ಹಲಸಿನ ಹಣ ್ಣನ ದಿನಗಳಲ್ಲಿ ಹಿಂಡು, ಹಿಂಡು ಕಾಡಾನೆಗಳು ತೋಟಗಳಿಗೆ ನುಗ್ಗಿ ಧ್ವಂಸಗೊಳಿಸುತ್ತಿವೆ. ಆದ್ದರಿಂದ ಆನೆಗಳು ತೋಟಕ್ಕೆ ನುಗ್ಗದಿರಲಿ ಎಂದು ಹಲಸಿನ ಹಣ್ಣುಗಳನ್ನು ಕೊಯ್ದು ಹೊರ ಹಾಕಲಾಗಿದೆ. (ಡಿ.ಹೆಚ್.ಅಜಿತ್ ಕುಮಾರ್, ಬೆಳೆಗಾರ)
ಫೋಟೋ :: ಎಲಿಫೆಂಟ್

Latest Indian news

Popular Stories

error: Content is protected !!