ಅರ್ಜಿ ಸಲ್ಲಿಸುವ ಕಲಾವಿದರಿಗೆ ತುಳು ಅಕಾಡೆಮಿ ಸಹಕಾರ

ಮಡಿಕೇರಿ ಮೇ ೩೧ : ಕೋವಿಡ್ ಸೋಂಕಿನ ೨ನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರಕಾರ ರೂ.೩ ಸಾವಿರ ಆರ್ಥಿಕ ನೆರವು ಘೋಷಿಸಿದ್ದು, ಈಗಾಗಲೇ ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ.
ಆದರೆ ಕೆಲವು ಕಲಾವಿದರು ಮಾಹಿತಿ ಮತ್ತು ಸೇವಾಸಿಂಧು ಬಗ್ಗೆ ತಿಳಿಯದೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದು, ಅಂತಹ ಕಲಾವಿದರಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಸಹಕಾರ ನೀಡಲಾಗುವುದೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಜೂ.೫ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ : ೯೯೭೨೦ ೭೩೨೯೫ ನ್ನು ಸಂಪರ್ಕಿಸಬಹುದಾಗಿದೆ.
::: ಅರ್ಜಿ ಸಲ್ಲಿಸಲು ನಿಯಮಗಳು :::
ಕಲಾವಿದರು ೩೫ ವರ್ಷ ಮೇಲ್ಪಟ್ಟವರಾಗಿರಬೇಕು, ಕನಿಷ್ಠ ಹತ್ತು ವರ್ಷಗಳ ಕಾಲ ಕಲಾಸೇವೆ ಮಾಡಿದ ಮಾಡಿರುವಂತಾಗಿರಬೇಕು, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯಿಂದ ಯಾವುದೇ ಮಾಸಾಶನ ಪಡೆಯುತ್ತಿರಬಾರದು ಮತ್ತು ಸರ್ಕಾರಿ ನೌಕರರಾಗಿರಬಾರದು.
೨೦೨೧-೨೨ನೇ ಸಾಲಿನ ಸಾಮಾನ್ಯ/ ವಿಶೇಷ ಘಟಕ / ಗಿರಿಜನ/ ಉಪ ಯೋಜನೆಯಡಿಯಲ್ಲಿ ಸಾಂಸ್ಕöÈತಿಕ ಸಂಘ-ಸAಸ್ಥೆಗಳ ಚಟುವಟಿಕೆಗಳಿಗೆ ಧನಸಹಾಯ ವಾದ್ಯಪರಿಕರ, ವೇಷಭೂಷಣ, ಖರೀದಿ ಶಿಲ್ಪಕಲೆ, ಚಿತ್ರಕಲಾ ಪ್ರದರ್ಶನಕ್ಕೆ ಧನಸಹಾಯ ಪಡೆದಂತಹ ಕಲಾವಿದರು ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಸುವವರು ಪೂರ್ಣ ವಿಳಾಸ, ಹೆಸರು, ಕಲಾಪ್ರಕಾರ, ಆಧಾರ್ ಸಂಖ್ಯೆ, ದೂರವಾಣ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್, ಕಲಾಸೇವೆ ಮಾಡಿರುವ ಕನಿಷ್ಠ ಒಂದು ಫೋಟೋ, ಜನ್ಮ ದಿನಾಂಕದ ಮಾಹಿತಿ ಸಲ್ಲಿಸಬೇಕಾಗುತ್ತದೆ ಎಂದು ರವಿ ತಿಳಿಸಿದ್ದಾರೆ. ಫೋಟೋ :: ಪಿ.ಎಂ.ರವಿ

Latest Indian news

Popular Stories

error: Content is protected !!