ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೇರಿ ಕೋಮ್

ಟೋಕಿಯೊ: ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಒಲಿಂಪಿಕ್ಸ್ ಕ್ರೀಡಾಕೂಟದ 51 ಕೆಜಿ ವಿಭಾಗದಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
2012ರ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ 38 ವರ್ಷದ ಮೇರಿ ಕೋಮ್ 15 ವರ್ಷ ಕಿರಿಯ ಮತ್ತು ಪ್ಯಾನ್ ಅಮೇರಿಕನ್ ಗೇಮ್ಸ್ ಕಂಚಿನ ಪದಕ ವಿಜೇತೆ ಗಾರ್ಸಿಯಾರನ್ನು 4-1 ಅಂತರದಿAದ ಮೇಲುಗೈ ಸಾಧಿಸಿದ್ದಾರೆ.
ಇಬ್ಬರ ನಡುವೆ ಬಿರುಸಿನ ಹೋರಾಟ ನಡೆಸಿದ್ದು ಗಾರ್ಸಿಯಾ ಹಾಕಿದ ಉತ್ಸಾಹಭರಿತ ಹೋರಾಟವನ್ನು ಜಯಿಸಲು ಮೇರಿ ಕೋಮ್ ಕೆಲವು ಅದ್ಭುತ ತಂತ್ರಗಳನ್ನು ಪ್ರದರ್ಶಿಸಿದರು.
ಮೊದಲ ಸುತ್ತಿನಲ್ಲಿ ಮೇರಿ ಕೂಮ್ ಎದುರಾಳಿ ವಿರುದ್ಧ ಗೆಲುವು ಸಾಧಿಸಿದ್ದು, ಗಾರ್ಸಿಯಾ ಎರಡನೇ ಸುತ್ತನ್ನು ತನ್ನದೇ ಆದ ಕೆಲವು ತೀವ್ರವಾದ ಹೊಡೆತಗಳಿಂದ ಗೆದ್ದರು ಬಳಿಕ ಅಂತಿಮ ಮೂರು ನಿಮಿಷಗಳಲ್ಲಿ ಅನುಭವಿ ಆಕ್ರಮಣಶೀಲತೆಯನ್ನು ವ್ಯಕ್ತಪಡಿಸಿದರು.
ನಾಲ್ಕು ಮಕ್ಕಳ ತಾಯಿ ಆಗಿರುವ ಮೇರಿ ಕೋಮ್ 2016ರ ರಿಯೊ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಮೂರನೇ ಶ್ರೇಯಾಂಕದ ಕೊಲಂಬಿಯಾದ ಪದಕ ವಿಜೇತೆ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೆಣಸಲಿದ್ದಾರೆ.

Latest Indian news

Popular Stories

error: Content is protected !!