ವ್ಯಕ್ತಿ ಕಾಣೆ: ಪ್ರಕರಣ ದಾಖಲು

ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ):ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ 20ನೇ ವಾರ್ಡ್‍ನ ನಿವಾಸಿ 63 ವರ್ಷದ ಜಿ.ಮುರಳಿಕೃಷ್ಣ ಎನ್ನುವ ವ್ಯಕ್ತಿ ಜೂ.8ರಿಂದ ಕಾಣೆಯಾಗಿರುವ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸಾಧಾರಣಾ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, 6ಅಡಿ ಎತ್ತರ, ಹೊಟ್ಟೆಯ ಬಲಭಾಗದಲ್ಲಿ ಹಳೇ ಗಾಯದ ಗುರುತು ಮತ್ತು ಎರಡು ಕಾಲುಗಳಿಗೆ ನರಗಳು ಉಬ್ಬಿದಂತೆ ಕಂಡು ಬರುತ್ತವೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಪ್ಪು ಬಣ್ಣದ ಪ್ಯಾಂಟ್, ತಿಳಿ ಹಳದಿ ಬಣ್ಣದ ತುಂಬು ತೋಳಿನ ಅಂಗಿ ಧರಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್‍ಐ ದೂ.ಸಂ:08396-248013, ಮೊ.ಸಂ:9480803055, ತೆಕ್ಕಲಕೋಟೆ ವೃತ್ತದ ಸಿಪಿಐ ದೂ.ಸಂ:08396-248044, ಬಳ್ಳಾರಿ ಗ್ರಾಮೀಣ ಉಪವಿಭಾಗದ ಡಿಎಸ್‍ಪಿ ದೂ.ಸಂ:08392-276000, ಬಳ್ಳಾರಿ ಎಸ್ಪಿ ದೂ.ಸಂ:08392-258400 ಗೆ ಸಂಪರ್ಕಿಸಬಹುದು

Latest Indian news

Popular Stories

error: Content is protected !!