ದೇಶದ್ರೋಹ ಕಾಯ್ದೆ ಈಗ ಬೇಕಾಗಿಲ್ಲ ಎಂದ ಮುಕುಲ್ ರೋಹಟಿಗಿ

ನವದೆಹಲಿ: ಪುರಾತನವಾಗಿರುವ ದೇಶದ್ರೋಹ ಕಾನೂನು ತನ್ನ ಉದ್ದೇಶವನ್ನು ಮೀರಿದೆ. ಇನ್ನು ಮುಂದೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕಲ್ ರೋಹಟಗಿ ಶುಕ್ರವಾರ ಹೇಳಿದ್ದು, ಈ ಕಾನೂನಿನ ಸಾಂವಿಧಾನಿಕ ಮಾನ್ಯತೆ ಕುರಿತ ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಎಎನ್ ಐ ಸುದ್ಧಿಸಂಸ್ಥೆಯೊAದಿಗೆ ಮಾತನಾಡಿದ ರೋಹಟಗಿ, ಹಿಂಸಾತ್ಮಾಕವಾಗಿ ಸರ್ಕಾರವನ್ನು ಪತನಗೊಳಿಸುವ ಭೀತಿಯಿಂದ ಸ್ಥಳೀಯರಲ್ಲಿನ ಭಿನ್ನಾಭಿಪ್ರಾಯವನ್ನು ಹತ್ತಿಕರಲು ಬ್ರಿಟಿಷರು ಈ ಕಾನೂನನ್ನು ಜಾರಿಗೊಳಿಸಿದ್ದಾಗಿ ತಿಳಿಸಿದರು.
ದೇಶ ಸ್ವಾತಂತ್ರಗೊAಡು 75 ವರ್ಷ ಕಳೆದರೂ ಐಪಿಸಿ ಸೆಕ್ಷನ್ 124 ಎ ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಬೆನ್ನಲ್ಲೇ, ರೋಹಟಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಅಬ್ಸರ್ ವೇಷನ್ ನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಈ ಕಾನೂನು ಸಂಪೂರ್ಣವಾಗಿ ಹಳೆಯದಾಗಿದೆ. ವಾಕ್ ಸ್ವಾತಂತ್ರ‍್ಯ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ದೃಷ್ಟಿಯಿಂದ ಈ ಕಾನೂನನ್ನು ಜಾರಿಗೆ ತರಲಾಗಿತ್ತು ಎಂದು ಅವರು ಹೇಳಿದರು.
ಇಂಗ್ಲೆAಡ್ ನಲ್ಲಿಯೂ ದೇಶದ್ರೋಹ ಅಪರಾಧ ಇಲ್ಲ. ಕಳೆದ 75 ವರ್ಷಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಉರುಳಿಸಲು ಯಾವುದೇ ಹಿಂಸಾತ್ಮಾಕ ಘಟನೆಗಳಾಗಿಲ್ಲ. ಈ ಪುರಾತನ ಕಾಲದ ಕಾನೂನಿನ ಅಗತ್ಯವಿಲ್ಲ ಎಂದಿರುವ ಅವರು, ಸಂವಿಧಾನದ ವಿಧಿ 377ನ್ನು ರದ್ದುಪಡಿಸಿದಂತೆ, ಮತ್ತೊಂದು ಪುರಾತನವಾದ ದೇಶದ್ರೋಹದ ಕಾನೂನನ್ನು ರದ್ದುಪಡಿಸಬೇಕಾಗಿದೆ ಎಂದು ರೋಹಟಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Latest Indian news

Popular Stories