ರಾಜೀನಾಮೆ ಸುದ್ದಿ ಸುಳ್ಳು ಎಂದ ಮುಖ್ಯಮಂತ್ರಿ ಬಿಎಸ್‌ವೈ

ನವದೆಹಲಿ: ರಾಜೀನಾಮೆ ಸುದ್ದಿ ಸಂಪುರ್ಣ ಸುಳ್ಳು ಎಂದಿರುವ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜೀನಾಮೆ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಅಂತಹ ಸುದ್ದಿಗಳಿಗೆ ಯಾವುದೇ ಮೌಲ್ಯ ಇಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನೆ. ಆಗಸ್ಟ್ನಲ್ಲಿ ಮತ್ತೆ ದೆಹಲಿಗೆ ಭೇಟಿ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ತಮ್ಮ ದೆಹಲಿ ಭೇಟಿ ಕುರಿತು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಯು ಮುನ್ನೆಲೆಗೆ ಬಂದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಢೀರನೇ ದೆಹಲಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ನಾಯಕತ್ವ ಬದಲಾವಣೆಗಾಗಿಯೇ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿರಬಹುದು ಎಂಬ ಚರ್ಚೆಯೂ ನಡೆದಿತ್ತು.
ಇದಕ್ಕೂ ಮುನ್ನ ನಾಯಕತ್ವ ಬದಲಾವಣೆ ವಿಷಯವು ಚರ್ಚೆಗೆ ಕಾರಣವಾಗಿದ್ದಾಗ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣಸಿಂಗ್ ಅವರು ಕಳೆದ ತಿಂಗಳು ಕರ್ನಾಟಕಕ್ಕೆ ಭೇಟಿ ನೀಡಿ ಚರ್ಚಿಸಿದ್ದರು. ನಾಯಕತ್ವ ಬದಲಾವಣೆ ಇಲ್ಲ ಎಂದು ಅರುಣಸಿಂಗ್ ಸ್ಪಷ್ಟಪಡಿಸಿದ ನಂತರವೂ ಈ ಕುರಿತ ಚರ್ಚೆ ಮುಂದುವರೆದಿತ್ತು. ಈ ವಿಷಯ ತಣ್ಣಗಾಗುವ ಮೊದಲೇ ಯಡಿಯೂರಪ್ಪ ಅವರಿಗೆ ದಿಡೀರನೆ ದೆಹಲಿಯಿಂದ ಬುಲಾವ್ ಬಂದಿದ್ದರಿAದ ಮತ್ತೊಂದು ಬಾರಿ ನಾಯಕತ್ವ ಬದಲಾವಣೆ ವಿಷಯವು ಚರ್ಚೆಯ ಕೇಂದ್ರವಾಗಿತ್ತು.
ಬಿಜೆಪಿ ವರಿಷ್ಠರ ಸ್ಪಷ್ಟ ಸೂಚನೆ, ಎಚ್ಚರಿಕೆಯ ನಂತರವೂ ಕರ್ನಾಟಕದಲ್ಲಿ ಕೆಲ ಬಿಜೆಪಿ ನಾಯಕರು, ಶಾಸಕರು ನಾಯಕತ್ವ ಬದಲಾವಣೆ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಈ ನಡುವೆಯೇ ಅಂದರೆ, ಕಳೆದ ಜೂನ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ವರಿಷ್ಠರು ಕೇಳಿದ ಕ್ಷಣವೇ ರಾಜಿನಾಮೆ ಕೊಡುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ, ಅದಾದ ಮರುದಿನವೇ ನಾನು ಪೂರ್ಣಾವಧಿಯ ಮುಖ್ಯಮಂತ್ರಿ, ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದೂ ಹೇಳಿದ್ದರು.
ಒಟ್ಟಾರೆ, ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳುಗಳಿAದ ನಾಯಕತ್ವ ಬದಲಾವಣೆ ವಿಷಯ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದರ ಜೊತೆತೆ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ಕೇಳಿ ಬರುತ್ತಿವೆ.

Latest Indian news

Popular Stories