ಪೆಟ್ರೋಲ್: 8 ದಿನಗಳಲ್ಲಿ 5 ಬಾರಿ ಬೆಲೆ ಏರಿಕೆ !

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುವಿಲ್ಲದಂತೆ ದಿನವೂ ಹೆಚ್ಚಳವಾಗುತ್ತಿದೆ. ಜುಲೈ ತಿಂಗಳಲ್ಲಿ ಅದೂ ಕೇವಲ 8 ದಿನಗಳ ಅಂತರದಲ್ಲಿ ತೈಲ ಧಾರಣೆ 5 ಭಾರಿ ಏರಿಕೆಯಾಗಿದೆ.
ಇಂದು ಡೀಸೆಲ್ ಬೆಲೆ ಏರಿಕೆಗೆ ಬಿಡುವು. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ಗಡಿ ದಾಟಿದ್ದು ಕರ್ನಾಟಕ ಸೇರಿದಂತೆ ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿಗಿಂತಲೂ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಶತಕ ಬಾರಿಸಿದ್ದು ಪೆಟ್ರೋಲ್ ಬೆಲೆ 100.21ರೂ. ಆಗಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 104 ರೂ. ದಾಟಿದೆ ರಾಜಸ್ತಾನ , ಹೈದರಾಬಾದನಲ್ಲಿ ಲೀಟರ್ ಪೆಟ್ರೋಲ್ ಬೆಲೆ 102 ರೂ. ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 106 ರೂ.ಗೆ ಏರಿದ್ದು, ಜೈಪುರದಲ್ಲಿ 106 ರೂ., ಬೆಂಗಳೂರಿನಲ್ಲೂ 103 ರೂ. ಆಗಿದೆ.
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒರಿಸ್ಸಾ, ಕೇರಳ, ಆಂಧ್ರಪ್ರದೇಶ, ಲಡಾಖ್, ಬಿಹಾರ, ಜಮ್ಮು ಕಾಶ್ಮೀರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.43 ರೂ. ದಾಟಿದೆ.. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದ್ದರೂ ಸದ್ಯ , ಡೀಸೆಲ್ ಬೆಲೆಯಲ್ಲಿ ಇಂದು ಹೆಚ್ಚಳವಾಗಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ವಿಚಾರದಲ್ಲಿ ಮತ್ತು ರಾಜ್ಯ ಕೇಂದ್ರದ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ರಾಜ್ಯಗಳು ತೆರಿಗೆ ಹೊರೆ ಮಾಡಿ ಜನರ ನೆರವಿಗೆ ಧಾವಿಸಬೇಕೆಂದು ಕೇಂದ್ರ ಸರ್ಕಾರ ವಾದ ಮಂಡನೆ ಮಾಡುತ್ತಿದೆ. ಬೆಲೆ ಏರಿಕೆಯಿಂದ ಹೆಚ್ಚಿನ ಲಾಭ ರಾಜ್ಯಗಳಿಗೆ ಬರುತ್ತಿದೆಯೇ ಹೊರತು ಕೇಂದ್ರಕ್ಕೆ ಬರುತ್ತಿಲ್ಲ ಎಂಬುದೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾದವಾಗುತ್ತಿದೆ.

Latest Indian news

Popular Stories

error: Content is protected !!