ಪಿಎಂ ಕಿಸಾನ್ ಸಮ್ಮಾನ್: 3000 ಕೋಟಿ ನಷ್ಟ

ನವದೆಹಲಿ : ದೇಶದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್) ಯಲ್ಲೂ ವಂಚನೆ ನಡೆಯುತ್ತಿದೆ. ಅಂದಾಜು 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆಗಳಿಗೆ ಹಣ ಜಮೆಯಾಗಿದ್ದು, 3,000 ಕೋಟಿ ರೂ. ನಷ್ಟವಾಗಿದೆ.
ಈ ಕುರಿತು ಕೇಂದ್ರ ಸರಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಅನರ್ಹ ರೈತರ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸರಕಾರ ಹೇಳಿದೆ.
ಕೃಷಿ ಸಚಿವಾಲಯದ ಪ್ರಶ್ನೆಗೆ ಉತ್ತರವಾಗಿ ಸಂಸತ್ತಿನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚದ್ದು, ಅಲ್ಲಿ 554 ಕೋಟಿ ರೂ.ಗೂ ಹೆಚ್ಚು ಹಣ 8.35 ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆಗಳಿಗೆ ಹೋಗಿದೆ ಎಂದು ತಿಳಿಸಲಾಗಿದೆ.
ತಮಿಳುನಾಡು ಎರಡನೇ ಸ್ಥಾನದಲ್ಲಿದೆ, ಅಲ್ಲಿ ಸುಮಾರು 340 ಕೋಟಿ ರೂ.ಗಳು 7.22ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆಗಳಿಗೆ ಹೋಗಿವೆ. ಪಂಜಾಬ್ ಮೂರನೇ ಸ್ಥಾನದಲ್ಲಿದ್ದು, 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವು 5.62 ಮಹಾರಾಷ್ಟ್ರದಲ್ಲಿ 357 ಕೋಟಿ ರೂ.ಗಳು ಅನರ್ಹ ರೈತರ ಖಾತೆಗಳಿಗೆ ಜಮೆಯಾಗಿವೆ. ಈ ಅನರ್ಹ ರೈತರ ಮಾಹಿತಿಯು ರೈತರ ಆಧಾರ್, ಪಿಎಂಎಸ್, ಆದಾಯ ತೆರಿಗೆ ಡೇಟಾಬೇಸ್ ಅನ್ನು ಪರಿಶೀಲಿಸುವಾಗ ಕೃಷಿ ಸಚಿವಾಲಯದ ಗಮನಕ್ಕೆ ಬಂದಿತು. ಈ ಎಲ್ಲಾ 42 ಲಕ್ಷಕ್ಕೂ ಹೆಚ್ಚು ಜನರು ಕಿಸಾನ್ ಸಮ್ಮಾನ್ ನಿಧಿಗೆ ಅನರ್ಹರಾಗಿದ್ದಾರೆ. ಇವರಲ್ಲಿ ಆದಾಯ ತೆರಿಗೆವ್ಯಾಪ್ತಿಗೆ ಬರುವವರೂ ಇದ್ದಾರೆ.

Latest Indian news

Popular Stories