ಎಸ್ ಐ ಓ ಮಾನ್ವಿ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೆಶನ್ ಆಫ್ ಇಂಡಿಯಾ, ಮಾನ್ವಿ ಘಟಕದ ವತಿಯಿಂದ ಉರ್ದು ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಅಂದ್ರೂನ್ ಖಿಲಾದಲಿ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಶಾನ್ ಮಾತನಾಡುತ್ತಾ ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎನ್ನುವುದು ಸಂಘಟನೆಯ ಆಶಯವಾಗಿದ್ದು, ಶಾಲೆಗಳ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕೋವಿಡ್ ನಂತರ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇನ್ನಷ್ಟು ಹದೆಗೆಟ್ಟಿದ್ದು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಈ ಶಾಲೆಗಳಲ್ಲಿ ಸಮಾಜದ ಬಡ ಹಾಗೂ ತಳ ಸಮುದಾಯಗಳ ಮಕ್ಕಳು ಓದುತ್ತಾರೆ. ಈ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ದೇಶ ಶೈಕ್ಷಣಿಕ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಒಂದು ವಿದ್ಯಾರ್ಥಿ ಸಂಘಟನೆಯಾಗಿ “ಸಬ್ ಕೋ ಶಿಕ್ಷಾ, ಸಮಾನ್ ಶಿಕ್ಷಾ” ಎಂಬ ಧ್ಯೇಯವಾಕ್ಯದಲ್ಲಿ ಸಂಘಟನೆ ನಂಬಿಕೆ ಇಟ್ಟಿರುತ್ತದೆ. ಎಂದು ಹೇಳಿದರು.ಎಸ್ ಐ ಓ ಮಾನ್ವಿ ಅಧ್ಯಕ್ಷ ಸಮೀರ್ ಪಾಷಾ ಮಾತನಾಡುತ್ತಾ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ಕೊಡಬೇಕೆಂಬ ದೃಷ್ಟಿಯಿಂದ ಇಂದು ಶಾಲೆಯ 50+ ಅಧಿಕ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ವಿತರಿಸಿಲಾಗಿದೆ. ಮುಂಬರುವ ದಿನಗಳಲ್ಲಿ ಎಸ್.ಐ.ಓ. ಸಂಘಟನೆ ನಗರದ ಸರ್ಕಾರಿ ಶಾಲೆಗಳ ಏಳಿಗೆ ಹಾಗೂ ಸೌಕಾರ್ಯಗಳನ್ನು ಒದಗಿಸಲಿಕ್ಕೆ ಶ್ರಮಿಸಲಿದೆ.


ಶಿಕ್ಷಣ ಸಂಯೋಜಕರಾಗಿರುವ ಯುನುಸ್ ಬಾಬಾ ಮಾತನಾಡುತ್ತಾ ಎಸ್.ಐ. ಓ. ವಿನ ಶೈಕ್ಷಣಿಕ ಕಾಳಜಿ ಅಭಿನಂದನಾರ್ಹ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ ಐ ಓ, ಕಾರ್ಯದರ್ಶಿಯಾದ ಯಾಸೀನ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಕರೀಂ ಖಾನ್, ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಜುಬೇರ್ ಖಾನ್, ಇಬ್ರಾಹಿಂ, ಅಝರ್, ಜಿಯರುಲ್ ಇಸ್ಲಾಂ, ಸಮೀರ್ ಖುರೇಷಿ, ಎಸ್. ಎಂ ಅಶ್ಫಾಕ್, ಅತಿಖ್, ಅಬ್ದುಲ್ ಆಜೀಜ , ಮಹೆಮೂದ್, ಆಮೀರ್ ಸೇರಿದಂತೆ ಇನ್ನಿತರರು ಉಪಸ್ಥಿತ ರಿದ್ದರು.

Latest Indian news

Popular Stories

error: Content is protected !!