CM Udasi Death ಉದಾಸಿಯವರು ನನಗೆ ದೊಡ್ಡಣ್ಣನಂತೆ ಇದ್ದರು : ಡಿಸಿಎಂ ಸವದಿ ಅಶ್ರುತರ್ಪಣ

ರಾಯಚೂರು, ಜೂ.೮ (ಕ.ವಾ):- CM Udasi Death ಸಾವನ್ನು ನಾವು ಯಾರೂ ಗೆಲ್ಲಲಾರೆವು ಎಂಬುದು ನಿಜ. ಬದುಕಿದ ಎಲ್ಲರಿಗೂ ಸಾವು ಕಟ್ಟಿಟ್ಟಬುತ್ತಿ. ಸಾವಿನ ಸರತಿಸಾಲಿನಲ್ಲಿ ಎಲ್ಲರೂ ನಿಂತಿರುತ್ತಾರೆ. ಆದರೆ ಕೆಲವರ ಸಾವು ನಮಗೆ ತೀವ್ರ ಆಘಾತ ನೀಡುತ್ತದೆ. ಅದೇ ರೀತಿ ಇಂದು ಸಿ.ಎಂ. ಉದಾಸಿ ಅವರ ಅಗಲಿಕೆ ತೀವ್ರ ದುಃಖ ಉಂಟುಮಾಡಿದೆ.

ಏಕೆಂದರೆ ಉದಾಸಿ ಅವರು ನಮ್ಮ ಪಾಲಿಗೆ ಕೇವಲ ರಾಜಕಾರಣದ ಮಿತ್ರರಾಗಿರಲಿಲ್ಲ. ಅವರೊಬ್ಬ ದೊಡ್ಡಣ್ಣ ನಂತೆ ನನಗೆ ಮತ್ತು ನಮ್ಮ ಪೀಳಿಗೆಯವರಿಗೆ ಮಾರ್ಗದರ್ಶಕರಾಗಿದ್ದರು.

ನಮ್ಮ ಕಷ್ಟಸಂಕಷ್ಟಗಳಿಗೆ ಸ್ಪಂದಿಸುವ ಹಿರಿಯ ಹಿತೈಷಿಯಾಗಿದ್ದರು. ಇವರ ಆತ್ಮಕ್ಕೆ ಶಾಂತಿ ಕೋರುವುದಷ್ಟೇ ಈಗ ನಮ್ಮ ಪಾಲಿಗೆ ಉಳಿದಿರುವ ಸಮಾಧಾನವಾಗಿದೆ.

ಹಾನಗಲ್ ಕ್ಷೇತ್ರದ ಶಾಸಕರಾಗಿ, ಮಾಜಿ ಸಚಿವರಾಗಿ, ಬಿಜೆಪಿಯ ಮುಖಂಡರಾಗಿ ನಮಗೆ ಆದರ್ಶರಾಗಿದ್ದ, ಸರಳ ಸಜ್ಜನ ವ್ಯಕ್ತಿತ್ವದ ರಾಜಕಾರಣ ಸಿ.ಎಂ. ಉದಾಸಿ ಅವರು ಜನಾನುರಾಗಿಯಾಗಿದ್ದರು. ಇವರ ಆಗಲಿಕೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ದಿವಂಗತರ ಪುತ್ರರಾದ ಸ್ನೇಹಿತ ಶ್ರೀ ಶಿವಕುಮಾರ ಉದಾಸಿ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ.

ಓಂ ಶಾಂತಿ

Latest Indian news

Popular Stories

error: Content is protected !!