ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಕನಕಗಿರಿ ಉಸ್ತುವಾರಿ ಕಡಗೋಳ ಚೇತನ ಭಾಗಿ

ರಾಯಚೂರು,ಜೂ.೧೨- ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಬ್ಲಾಕ ಹಾಗೂ ಕಾರಟಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈ ಸಂರ್ದಭದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕಡಗೋಳ ಚೇತನ ಕುಮಾರ, ವೆಂಕಟೇಶ ತಂಗಡಿಗಿ, ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ ನಾಯಕ, ಅಂಬರೀಶ್ ಗೋನಾಳ, ನೀಳೊಡ್ ಸಿದಪ್ಪ, ತಾಲೂಕ್ ಪಂಚಾಯಿತಿ ಉಪಾಧ್ಯಕ್ಷ ರಾಮನಗೌಡ ಗಂಗಾಧರಸ್ವಾಮಿ, ಶ್ರೀನಿವಾಸ್ ರೆಡ್ಡಿ, ಬ್ಲಾಕ್ ಕನಕಗಿರಿ ಅಧ್ಯಕ್ಷರು ಶಶಿಧರ್ ಗೌಡ ಬಾಪುಗೌಡ, ದಾನನ ಗೌಡ ಪನ್ನಾಪೂರ್, ಬಸವರಾಜ್ ಬೂದಿ ಬಸವರಾಜ್, ಪಗಡದಿನ್ನಿ, ಶರಣಪ್ಪ ಪರ್ಕಿ, ಅಯ್ಯಪ್ಪ ಉಪ್ಪಾರ್, ಹನುಮೇಶ್ ಬಂಗಿ ಗದ್ದಪ್ಪ, ಪ್ರಕಾಶ್ ಬಾವಿ, ಮಹೇಶ್ ಕಾಗಲ್, ವೀರೇಶ್, ಟಿವಿಎಸ್ ರಮೇಶ್, ಕೋಟೆಲ್ಲ ಮೋಹಿದ್ದಿನ್ ಇನ್ನಿತರರು ಉಪಸ್ಥಿತರಿದ್ದರು

Latest Indian news

Popular Stories

error: Content is protected !!