ವೈದ್ಯಕೀಯ ಆಮ್ಲಜನಕ ಪೂರೈಸುವ ಬಸ್‌ಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ

ರಾಯಚೂರು, ಮೇ.೨೮(ಕ.ವಾ):- ಕೋವಿಡ್ ಸೋಂಕಿತ ರೋಗಿಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲಿಯೇ ವೈದ್ಯಕೀಯ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಸಿದ್ದಪಡಿಸಲಾಗುತ್ತಿರುವ ವಿಶೇಷ ಬಸ್‌ಗಳ ವಿನ್ಯಾಸ ಹಾಗೂ ಕಾರ್ಯಪ್ರಕ್ರಿಯೆನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಮೇ.೨೮ರ ಶುಕ್ರವಾರ ನಗರದ ಆರ್‌ಟಿಓ ವೃತ್ತದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋಗೆ ಭೇಟಿ ನೀಡಿದ್ದರು.
ಕೋವಿಡ್ ಸೋಂಕು ತೀವ್ರಗೊಂಡು ಆಮ್ಲಜಕ ಅತ್ಯಗತ್ಯವಿರುವ ರೋಗಿಗಳಿಗೆ ಪ್ರಾಣಪಾಯದಿಂದ ಪಾರು ಮಾಡಲು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿದ ಆಮ್ಲಜಕನ ಪೂರೈಕೆ ಬಸ್‌ಗಳು ನೆರವಿಗೆ ಧಾವಿಸಲಿವೆ, ರೋಗಿಗಳಿಗೆ ಆಕ್ಸಿಜಿನ್ ಮತ್ತು ವೆಂಟಿಲೇಟರ್ ಕೊರತೆ ಕಂಡುಬAದಲ್ಲಿ ಅಂತಹವರಿಗೆ ತಕ್ಷಣವೇ ಈ ಬಸ್‌ಗಳಲ್ಲಿ ಅಳವಡಿಸಲಾಗಿರುವ ಆಕ್ಸಿಜನ್ ಪೂರೈಕೆ ಯಂತ್ರಗಳ ಮೂಲಕ ಆಮ್ಲಜನಕವನ್ನು ಪೂರೈಸಬಹುದು, ಅದಕ್ಕೆಂದೆ ವಿಶೇಷವಾಗಿ ಈ ಬಸ್‌ಗಳನ್ನು ವಿನ್ಯಾಸ ಮಾಡಲಾಗಿದೆ, ಈ ಬಸ್‌ಗಳು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳ ಮುಂದೆ ನಿಲುಗಡೆ ಮಾಡಲಿವೆ, ಕೊರೋನಾ ರೋಗಿಗಳು ಆಸ್ಪತ್ರೆಗಳಿಗೆ ಬಂದಾಗ ತಕ್ಷಣವೇ ಅವರಿಗೆ ವಿಶ್ರಮಿಸಿ ಆಕ್ಸಿಜಿನ್ ನೀಡಲು ಈ ಬಸ್ ಸಹಕಾರಿಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಈ ಬಸ್‌ನಲ್ಲಿರುವ ವಿಶೇಷ ಆಕ್ಸಿಜಿನ್ ಸೌಲಭ್ಯವು ಉಪಯೋಗಕ್ಕೆ ಬರಲಿದೆ, ಅಲ್ಲದೇ ರೋಗಿಯನ್ನು ಸಾವಿನಿಂದ ರಕ್ಷಣೆ ಮಾಡಬಹುದು ಎಂದರು.
ಈ ಬಸ್‌ನಲ್ಲಿ ೪ ಬೆಡ್, ವೆಂಟೆಲೇಟರ್ ಮತ್ತು ಆಕ್ಸಿಜಿನ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೇವೆಗೆ ಅರ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕ್ಯಾಶುಟೆಕ್ ಅಧಿಕಾರಿ ಶರಣಬಸಪ್ಪ ಪಟ್ಟೇದ್, ಕೆಎಸ್‌ಆರ್‌ಟಿಸಿ ಡಿಸಿ ವೆಂಕಟೇಶ, ಡಿಎಂಇ ನಾರಾಯಣಪ್ಪ ಗೌಡಗಿರಿ, ಡಿಎಸ್‌ಐ ಎಸ್.ಎಂ.ಫಾರೂಕ್ ಇತರರು ಇದ್ದರು.

Latest Indian news

Popular Stories

error: Content is protected !!