ಪ್ರಾಣ ಹಿಂಸೆ ಮಾಡುವವರು ವಿರುದ್ಧ ಕಾನೂನು ಕ್ರಮ: ಎಡಿಸಿ

ರಾಯಚೂರು, ಜು.೦೮, (ಕ.ವಾ):- ಪ್ರಾಣ ಗಳನ್ನು ಗಾಯಗೊಳಿಸುವುದು, ಕೊಲ್ಲುವುದು, ಪ್ರಾಣ ಗಳ ಕಾದಾಟ ಮಾಡಿಸುವುದು ಸೇರಿದಂತೆ ಪ್ರಾಣ ಹಿಂಸೆ ಕೃತ್ಯಗಳ ಮಾಡುವವರು ವಿರುದ್ಧ ಪ್ರಾಣ ಹಿಂಸೆ ಪ್ರತಿಬಂಧಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಅವರು ತಿಳಿಸಿದರು.

ಅವರು ಜು.೮ರ ಗುರುವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ರಾಣ ದಯಾ ಸಂಘದ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಣ ಯನ್ನು ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತೀಭಾರ ಹೇರುವುದು, ಚಿತ್ರಹಿಂಸೆ ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ಮಾಲೀಕನಾಗಿ ಅವಶ್ಯಕ ನೀರು, ಆಹಾರ, ನೆಲೆ ಸಕಾಲದಲ್ಲಿ ನೀಡದೇ ಇರುವುದು ಕಂಡು ಬಂದಲ್ಲಿ ಕೃತೆಗನುಸಾರವಾಗಿ ದಂಡ ಹಾಗೂ ೩ ತಿಂಗಳವರೆಗೆ ಕಾರಾಗೃಹ ವಾಸದ ಸಜೆ ಶಿಕ್ಷೆ ವಿಧಿಸಲಾಗುವುದು ಎಂದರು

ಕರ್ನಾಟಕ ಪ್ರಾಣ ಬಲಿ ನಿಷೇಧ ಕಾಯ್ದೆಯಡಿ ಯಾವುದೇ ಸಾರ್ವಜನಿಕ ದೇವಸ್ಥಾನ ಅಥವಾ ಪೂಜಾ ಸ್ಥಳದಲ್ಲಿ ಅದರ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಪ್ರಾಣ ಬಲಿ ಸಂಪೂರ್ಣ ನಿಷೇಧ ಹಾಗೂ ೬ ತಿಂಗಳ ಸೆರೆವಾಸ, ೫೦೦ ರೂ. ದಂಡವಿಧಿಸಲಾಗುವುದು ಎಂದು ಹೇಳಿದರು.

ಪ್ರಾಣ ಪಕ್ಷಿಗಳಿಗಾಗಿ ಸುತ್ತಲಿನ ಪರಿಸರದಲ್ಲಿ ನೀರು, ಮೇವು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೇರೆಯಬೇಕು ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಜಿಲ್ಲಾ ಪಶು ಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಶಿವಣ್ಣ, ರಾಯಚೂರು ನಗರ ಸಭೆ ಪೌರಾಯುಕ್ತ ವೆಂಕಟೇಶ, ಮುಖ್ಯ ಪಶು ವೈದ್ಯಧಿಕಾರಿ ಡಾ. ಎಸ್ ಎಸ್ ಪಾಟೀಲ್ ಸೇರಿದಂತೆ ವಿವಿಧ ತಾಲೂಕಿನ ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು

Latest Indian news

Popular Stories