ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ. ೩ಕ್ಕೆ ಇಳಿಕೆ ಸೋಮವಾರ ದಿಂದ ಶುಕ್ರವಾರದವರೆಗೆ ೬ ರಿಂದ ೨ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ಆರ್. ವೆಂಕಟೇಶ ಕುಮಾರ್

ರಾಯಚೂರು, ಜೂ.೧೨ (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ಪ್ರಕರಣ ಶೇಕಡಾ ೩ ಕ್ಕಿಂತ ಕಡಿಮೆಯಾದ ಕಾರಣ ಕೆಲವೊಂದು ಸಡಿಲಿಕೆಗಳನ್ನು ನೀಡಲಾಗಿದ್ದು, ಸೋಮವಾರ ದಿಂದ ಶುಕ್ರವಾರದವರೆಗೆ ಅಗತ್ಯ ವಸ್ತುಗಳ ಖರೀದಿ ಸೇರಿ, ಸಣ್ಣ ಕೈಗಾರಿಕೆಗಳು ಹಾಗೂ ವೈಟಿಪಿಎಸ್, ಆರ್‌ಟಿಪಿಎಸ್ ನಲ್ಲಿ ಶೇ ೫೦ ರಷ್ಟು ಸಿಬ್ಬಂದಿಗಳೊAದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿರುವುದುನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.

ಅವರು ಜೂ.೧೨ರ ಶನಿವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.೫ ರಷ್ಟಿತ್ತು, ಇದೀಗ ಪಾಸಿಟಿವಿಟಿ ಪ್ರಮಾಣ ಶೇ. ೩ಕ್ಕೆ ಇಳಿದಿದೆ, ಆದ ಕಾರಣ ಜಿಲ್ಲೆಯಲ್ಲಿ ಕೆಲವೊಂದು ಅಗತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಉಳಿದ ಚಟುವಟಿಕೆಗಳಿಗೆ ಈ ಹಿಂದಿನAತೆಯೇ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಜೂ. ೧೪ರ ಸೋಮವಾರ ದಿಂದ ಶುಕ್ರವಾರದ ವರೆಗೆ ಬೆಳೆಗ್ಗೆ ೬ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ, ಕಾರ್ಖಾನೆಗಳು, ಉತ್ಪಾದಕ ರಂಗಗಳು ವೈಟಿಪಿಎಸ್, ಆರ್‌ಟಿಪಿಎಸ್, ಜಿಲ್ಲೆಯಲ್ಲಿರುವ ಔಷಧ ಕಾರ್ಖಾನೆಗಳು ಶೇ ೫೦ ರಷ್ಟು ಕಾರ್ಮಿಕರನ್ನು ಬಳಸಿಕೊಂಡು ದೈನಂದಿನ ಕೆಲಸ ಕಾರ್ಯನಿರ್ವಹಿಸಬಹುದು, ಪ್ರತಿದಿನ ಬೆಳಿಗ್ಗೆ ೬ ರಿಂದ ೨ ಗಂಟೆಯ ವರೆಗೆ ಅಗತ್ಯ ವಸ್ತುಗಳಾದ ಕಿರಾಣ ವಸ್ತುಗಳು, ನೀರು, ಹಾಲು, ಮಾಂಸ, ಹಣ್ಣು ಮಾರಾಟಕ್ಕೆ ಅವಕಾಶವಿದೆ, ಬ್ಯಾಂಕುಗಳು ಬೆಳಗ್ಗೆ ೬ ರಿಂದ ೨ ರವರೆಗೆ ತೆಗೆಯಲು ಅವಕಾಶ ನೀಡಿದೆ. ಬಾರ್, ರೆಸ್ಟೋರೆಂಟ್‌ಗಳು ಅವಕಾಶ ನೀಡಿಲ್ಲ, ಆದರೆ ಅಲ್ಲಿ ಕೌಂಟರ್‌ಗಳ ಮೂಲಕ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗಿದೆ, ಅದರಂತೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ, ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಂಗಡಿ, ಸ್ಟೀಲ್, ಸಿಮೆಂಟ್ ಅಂಗಡಿ, ತೆರೆಯಲು ೬ ರಿಂದ ೨ ರವರೆಗೆ ಅವಕಾಶ ನೀಡಲಾಗಿದೆ, ಉಳಿದಂತೆ ಇತರೆ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ, ಆಟೋ ಮತ್ತು ಟ್ಯಾಕ್ಸಿ ಗೆ ಸಡಿಲಿಕೆ ನೀಡಿದ್ದು ಇಬ್ಬರು ಪ್ರಯಾಣಕರೊಂದಿಗೆ ಅವುಗಳು ಸಂಚರಿಸಬಹುದಾಗಿದೆ ಎಂದು ಹೇಳಿದರು.

ಅಂಚೆ ಕಚೇರಿ ಬೆಳಗ್ಗೆ ೬ ರಿಂದ ೨ ರವರೆಗೆ ಕಾರ್ಯನಿರ್ವಹಿಸಬಹುದಾಗಿದೆ, ವಾರಾಂತ್ಯದ ಕರ್ಫ್ಯೂನಲ್ಲಿ ಜನ ಸಂಚಾರಕ್ಕೆ ಅವಕಾಶವಿಲ್ಲ, ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ, ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.

ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಂತರಾಜ್ಯ ಸಂಚಾರಕ್ಕೆ ಪರವಾನಗಿ ಪಡೆಯಬೇಕಿರುತ್ತದೆ, ಹೊರಗಿನಿಂದ ಇಲ್ಲಿಗೆ ಬಂದರೆ, ೭ ದಿನಗಳವರೆಗೆ ಹೊಂ ಕ್ವಾರೆಂಟನ್‌ನಲ್ಲಿರಬೇಕು, ಬ್ಲಾಕ್ ಫಂಗಸ್ ರೋಗಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಒಟ್ಟು ೩೫ ಪ್ರಕರಣಗಳಲ್ಲಿ ಶಸ್ತçಚಿಕಿತ್ಸೆಯಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

ಪ್ರಮುಖವಾಗಿ ರೈತರು ಬೆಳೆದ ಬೆಳೆಗಳಿಗೆ ಅನುಕೂಲತೆ ಕಲ್ಪಿಸಲು ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೨ ಗಂಟೆಯ ವರೆಗೆ ಎಪಿಎಂಸಿಯಲ್ಲಿ ವಹಿವಾಟು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಗೋಷ್ಠಿಯಲ್ಲಿದ್ದರು

೧೪ರ ರಿಂದ ೧೮ರ ವರೆಗೆ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ: ಜಿಲ್ಲಾಧಿಕಾರಿ
ರಾಯಚೂರು, ಜೂ.೧೨ (ಕ.ವಾ):- ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಇದೇ ಜೂ.೧೧ರ ಬೆಳಿಗ್ಗೆ ೬ ಗಂಟೆಯಿAದ ಜೂ.೨೧ರ ಬೆಳಿಗ್ಗೆ ೬ ಗಂಟೆವರೆಗೆ ಕಂಟೈನ್‌ಮೆAಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿರುತ್ತದೆ.

ಈ ಮಾರ್ಗಸೂಚಿಗಳನ್ವಯ ರಾಯಚೂರು ಜಿಲ್ಲೆಯಾದ್ಯಂತ ಕೋವಿಡ್-೧೯ನ ಎರಡನೆ ಅಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ, ವಿದ್ಯುತ್, ಪೆಟ್ರೋಲ್ ಪಂಪ್, ಮತ್ತು ಇತರ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಒಳಗೊಂಡAತೆ ಇನ್ನೂ ಕೆಲವು ಚಟುವಟಿಕೆಗಳಿಗೆ ಮಾತ್ರ ೨೦೨೧ರ ಜೂ. ೧೪ರ ಬೆಳಿಗ್ಗೆ ೬ ಗಂಟೆಯಿAದ ಜೂ. ೨೧ರ ಬೆಳಿಗ್ಗೆ ೬ ಗಂಟೆವರೆಗೆ ವಿನಾಯಿತಿ ನೀಡಲಾಗಿರುತ್ತದೆ ಹಾಗೂ ರಾತ್ರಿ ಕರ್ಪ್ಯೂ ಅನ್ನು ಸಂಜೆ ೭ ರಿಂದ ಬೆಳಿಗ್ಗೆ ೫ ರವರೆಗೆ ಮತ್ತು ವಾರಂತ್ಯದ ಕರ್ಪ್ಯೂನ್ನು ಜೂ. ೧೮ರ (ಶುಕ್ರವಾರ) ರಾತ್ರಿ ೭ ಗಂಟೆಯಿAದ ಜೂ. ೨೧ರ (ಸೋಮವಾರ) ಬೆಳಿಗ್ಗೆ ೫ ಗಂಟೆವರೆಗೆ ಜಾರಿಗೊಳಿಸಲಾಗಿರುತ್ತದೆ.

ಜೂ.೧೪ರ (ಸೋಮವಾರ) ದಿಂದ ಜೂ. ೧೮ರ (ಶುಕ್ರವಾರ) ವರೆಗೆ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨ ಗಂಟೆವರೆಗೆ ಅಗತ್ಯ ವಸ್ತುಗಳಾದ ನೀರು, ಹಾಲು, ಹಣ್ಣು, ಕಿರಾಣ ಅಂಗಡಿ, ತರಕಾರಿ, ಮಾಂಸ, ಮೀನು ಮಾರಾಟ ಹಾಲಿನ ಡೈರಿ / ಬೂತ್‌ಗಳು, ಬೀದಿ ವ್ಯಾಪರಿಗಳಿಗೆ ಹಾಗೂ ಜಾನುವಾರುಗಳ ಮೇವುಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ ೨ ಗಂಟೆಯಿAದ ಬೆಳಿಗ್ಗೆ ೬ರ ವರೆಗೆ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಅಗ್ನಿ ಶಾಮಕ, ವಿದ್ಯುತ್, ಪೆಟ್ರೋಲ್ ಪಂಪ್ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories