ಸತತ ಮಳೆ: ಬಿಸಿಲನಾಡಲ್ಲಿ ಕೈಬೀಸಿ ಕರೆಯುತ್ತೀವೆ ಪ್ರವಾಸಿ ತಾಣಗಳು

*ಧುಮ್ಮಿಕಿ ಹರಿಯುತ್ತಿದೆ ಗುಂಡಲಬAಡಾ ಜಲಪಾತ * ಕಾಲು ಇಟ್ಟಲೆಲ್ಲ ಹಸಿರ ಹೊದಿಕೆ
ರಮೇಶ ಪಿ.ಗೌಡೂರು ಜಾಲಹಳ್ಳಿ.
ರಾಯಚೂರು, ಜು.೨೩, (ಕ.ವಾ):- ಕೋವಿಡ್‌ನಿಂದಾಗಿ ಮನೆಯಲ್ಲಿಯೇ ಕುಳಿತು ಅದೆಷ್ಟೋ ದಿನವಾಗಿ ಬಿಟ್ಟಿದೆ ಅಲ್ವೇ. ವೀಕೆಂಡ್​ನಲ್ಲಿ ಟ್ರಿಪ್​ ಹೋಗಲು ಪ್ಲಾನ್​ ಮಾಡುತ್ತಿರಬಹುದು. ಸ್ನೇಹಿತರನ್ನು ಭೇಟಿ ಮಾಡದೆ ಬಹಳಷ್ಟು ದಿನಗಳು ಕಳೆದು ಹೋಗಿದೆ. ಹೀಗಿರುವಾಗ ಎಲ್ಲರೂ ಸೇರಿ ಒಂದು ದಿನ

Tourist places in and around Bhilai

ಪ್ರವಾಸಕ್ಕೆ ಹೋಗಲು ಯೋಚಿಸಿರಬಹುದು. ಆದರೆ ಒಂದು ದಿನದಲ್ಲಿ ಭೇಟಿ ನೀಡಲು ಸಾಧ್ಯವಿರುವ ಪ್ರವಾಸಿ ಸ್ಥಳಗಳು ಜಿಲ್ಲೆಯಲ್ಲಿ ಎಲ್ಲಿವೆ.? ಹತ್ತಿರದಲ್ಲಿರುವ ಕೆಲವು ಸ್ಥಳಗಳು ಕೇವಲ ೯೦ ರಿಂದ ೧೦೦ ಕಿಲೋಮೀಟರ್​ ವ್ಯಾಪ್ತಿಯಲ್ಲಿರುವ ಸುಂದರ ಸ್ಥಳಗಳಿವು. ಒಂದು ದಿನ ಆರಾಮವಾಗಿ ಸಮಯ ಕಳೆಯಬಹುದಾಗಿದೆ.

ಮಳೆಗಾಲದ ಈ ಸಮಯದಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಒಂದು ಸಂಭ್ರಮ. ಹಚ್ಚ-ಹಸುರಿನ ಮಧ್ಯೆ ತನ್ನಪಾಡಿಗೆ ತಾನು ಹರಿಯುವ ನದಿಗೆ ಇಲ್ಲಿ ಚಿಂತೆಯಿಲ್ಲ,

ಯಾವುದೇ ಒತ್ತಡವಿಲ್ಲ. ಆದರೆ ಮನುಷ್ಯನ ಆತಂಕವನ್ನು.. ಚಿಮತೆಯನ್ನು ಮರೆಸುವ ಶಕ್ತಿ ಇದೆ. ಸೈಸರ್ಗಿಕ ಸೌಂದರ್ಯವನ್ನು ನೋಡುತ್ತಲೇ ಪ್ರವಾಸಿಗರು ಮೈ ಮರೆಯುತ್ತಾರೆ. ಪ್ರಕೃತಿಯ ಸೊಬಗಿಗೆ ಮರಳಾಗದಿರುವವರು ಇದ್ದಾರೆಯೇ.

ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣಗಳು
ವೀರಗೋಟ್ ಅಡವಿಲಿಂಗ:
ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಗೋಟ್ ಗ್ರಾಮದ ಶ್ರೀ ಅಡವಿಲಿಂಗ ಮಹಾರಾಜ ಸ್ಥಳವಾಗಿದ್ದು, ಇಲ್ಲಿ ಗುಡ್ಡಗಾಡು ಪ್ರದೇಶವಾದರಿಂದ ನೋಡಲು ಬಲು ಮಜವಾಗಿರುತ್ತದೆ. ಅಲ್ಲದೆ ಕೃಷ್ಣ ನದಿಯ ಆಕಡೆ ಅವತಾರಿ ಶಕ್ತಿ, ಬ್ರಹ್ಮವೆತ್ತರೂ, ಲೀಲಾಮೂರ್ತಿ ಜಗದ್ಗುರು ತಿಂಥಣ ಶ್ರೀಮೌನೇಶ್ವರರು ೧೬ನೇ ಶತಮಾನದಲ್ಲಿ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಚೈತನ್ಯ ಶಕ್ತಿಯಾಗಿ ಹಲವು ಲೀಲೆ ತೋರಿರುವ ಸ್ಥಳವಾಗಿದೆ.

ಬಸವ ಸಾಗರ ಜಲಾಶಯದಿಂದ ಭೋರ್ಗರೆಯುವ ಕೃಷ್ಣೆ ಮೌನೇಶ್ವರರು ನೆಲೆ ನಿಂತ ತಿಂಥಣ ಯ ಆಸುಪಾಸಿಗೆ ಬಂದಾಕ್ಷಣ ಮೌನವಾಗಿ ಹರಿಯುವುದು ಒಂದು ವಿಶೇಷವಾಗಿದೆ.

ಗುಂಡಲಬAಡಾ ಜಲಪಾತ;
ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಗೋಲಪಲ್ಲಿ ಗ್ರಾಮದ ಬಳಿಯ ಗುಡ್ಡಗಳಲ್ಲಿ ಭೋರ್ಗರೆಯುತ್ತಿರುವ ಗುಂಡಲಬAಡಾ ಜಲಪಾತ ನೋಡುಗರ ಕಣ ್ಣಗೆ ಹಬ್ಬವೇ ಸರಿ.
ರಾಯಚೂರು ಜಿಲ್ಲೆಯ ಏಕೈಕ ಜಲಪಾತ ಎಂಬ ಖ್ಯಾತಿ ಪಡೆದ ಗುಂಡಲಬAಡಾ ಜಲಪಾತ ಸುಮಾರು ೧೦೦ ಅಡಿ ಎತ್ತರದಿಂದ ಬೃಹತ್ ಬಂಡೆಗಳ ಮೇಲಿಂದ ಧುಮ್ಮಿಕ್ಕುತ್ತಿದೆ.

ಈ ಜಲಪಾತದ ನಯನ ಮನೋಹರ ದೃಶ್ಯ ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಗುಂಡಲಬAಡಾ ಜಲಪಾತದ ಸೌಂದರ್ಯ ಕಣ್ತುಂಬಿಸಿಕೊಳ್ಳಬೇಕಿದ್ದರೆ ಒಂದಿಷ್ಟು ಕಷ್ಟ ಪಡಬೇಕು.

ಗುರುಗುಂಟಾ ಅಮರೇಶ್ವರ;
ಉತ್ತರ ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ದೇವಾಲಯಗಳಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಗುರುಗುಂಟಾ ಅಮರೇಶ್ವರ ದೇವಸ್ಥಾನವೂ ಒಂದು. ಸಹಸ್ರಾರು ಭಕ್ತರ ಮನದಲ್ಲಿ ನೆಲೆಗೊಂಡ ಅಮರೇಶ್ವರ ದೇವಸ್ಥಾನವು ತನ್ನದೇಯಾದ ಚಾಪು ಹೊಂದಿದೆ.

ಜಲದುರ್ಗ ಕೋಟೆ:
ಜಲದುರ್ಗ ಕೋಟೆಯಲ್ಲಿ ಎತ್ತ ನೋಡಿದರೂ ಕಣ್ಣು ಹಾಯಿಸಿದಷ್ಟು ಬರಿ ಗುಡ್ಡ ಬಂಡೆಗಲ್ಲುಗಳು, ಕಾಲು ಇಟ್ಟಲೆಲ್ಲ ಹಸಿರ ಹೊದಿಕೆ, ಎತ್ತರಕ್ಕೆ ಬೆಳೆದ ಮರಗಳು, ಪಾಳು ಬಿದ್ದಿರುವ ಕೋಟೆಗಳ ಅವಶೇಷಗಳು, ಬುರುಜು, ಪಕ್ಕಕ್ಕೆ ಪ್ರಶಾಂತವಾಗಿ ಹರಿಯುತ್ತಿರುವ ಕೃಷ್ಣಾ ನದಿ. ನಾಟಿ ವೈದ್ಯರು, ಇಲ್ಲಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸುತ್ತಾರAತೆ.

ನಾರಾಯಣಪುರ ಆಣೆಕಟ್ಟು:
ಜಿಲ್ಲೆಯ ಲಿಂಗಸೂಗೂರು ತಾಲೂಕಿಗೆ ಹತ್ತಿರವಿರುವ ನಾರಾಯಣಪುರ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈಅಣೆಕಟ್ಟುನಿರ್ಮಿಸಲಾಗಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಈ ಜಲಾಶಯವು ೧೦,೬೩೭ ಮೀಟರ್ ಉದ್ದ ಹಾಗೂ ೨೯ ಮೀಟರ್ ಎತ್ತರ ಹೊಂದಿದ್ದು, ನೋಡುಗರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದೆ.

ಗಬ್ಬೂರು:
ರಾಯಚೂರಿನ ಗಬ್ಬೂರು ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ನಿರ್ಮಿಸಲಾದ ಸುಮಾರು ೩೦ ದೇವಾಲಯಗಳು ಮತ್ತು ಶಿಲಾ ಶಾಸನಗಳಿವೆ.

ರಾಯಚೂರು ಕೋಟೆ:
ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಿಸಲ್ಪಟ್ಟ ಮತ್ತು ಕಾಕತೀಯ ರುದ್ರಮ್ಮ ದೇವಿಯಿಂದ ವಿಸ್ತರಿಸಲ್ಪಟ್ಟ ರಾಯಚೂರು ಕೋಟೆ ಮಲಿಕ್ ಕಾಫೂರ್, ವಿಜಯನಗರ ಸಾಮ್ರಾಜ್ಯ, ಬಹಮನಿಗಳು, ಮೊಘಲರು, ಬಿಜಾಪುರ ಆಡಳಿತಗಾರರು ಮತ್ತು ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿತ್ತು. ರಾಯಚೂರು ಕೋಟೆ ವ್ಯಾಪ್ತಿಯಲ್ಲಿ ಅನೇಕ ಮಸೀದಿಗಳಿವೆ, ಹಲವಾರು ಭವ್ಯ ಪ್ರವೇಶದ್ವಾರಗಳುಮತ್ತು ಇತರ ಅವಶೇಷಗಳನ್ನು ರಾಯಚೂರು ಕೋಟೆಯಲ್ಲಿ ನೋಡಬಹುದಾಗಿದೆ. ವಾರವಿಡೀ ಕೆಲಸ, ಬ್ಯುಸಿ ಲೈಫ್​ನಲ್ಲಿ ಸಿಗುವ ವೀಕೆಂಡ್​ನಲ್ಲಿ ಸುಂದರ ತಾಣಗಳ್ನು ವೀಕ್ಷಿಸುತ್ತಾ ನಿಮ್ಮ ಚಿಂತೆಗಳನ್ನು ದೂರ ಮಾಡಿಕೊಳ್ಳಲು ಒಳ್ಳೆಯ ಪ್ರೇಕ್ಷಣ Ãಯ ಸ್ಥಳಗಳಿವು.

ಕೋಟ್:
೧) ಜಿಲ್ಲೆಯ ಗುಂಡಲಬAಡಾ ಜಲಪಾತ, ಜಲದುರ್ಗ ಕೋಟೆ ಸೇರಿದಂತೆ ಆನೇಕ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಮಳೆಗಾಲದಲ್ಲಿ ನೋಡುವುದೇ ಬಲುಚಂದವಾಗಿದೆ. ಇಂತಹ ಕಣ್ಣಮನ ಸೆಳೆಯುವ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿರುವುದು ಜಿಲ್ಲೆಯ ಜನರ ಸೌಭಾಗ್ಯವಾಗಿದೆ.
– ಸಾನ್ವಿ ಪ್ರಶಾಂತ್, ರಾಯಚೂರು ನಿವಾಸಿ.

Latest Indian news

Popular Stories