ಕಾನೂನು; ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ

ರಾಯಚೂರು, ಜು.೦೬, (ಕ.ವಾ):- ೨೦೨೧-೨೨ನೇ ಸಾಲಿಗೆ ಜಿಲ್ಲೆಯ ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳದ ವರ್ಗಗಳಿಗೆ ಸೇರಿದ ಪ್ರವರ್ಗ-೧, ೨ಎ, ೩ಎ, ೩ಬಿ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ತರಬೇತಿ ಭತ್ಯೆಗೆ ಆಯ್ಕೆ ಮಾಡಲು ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಷರತುಗಳು ಇಂತಿವೆ:
ಜಿಲ್ಲೆಯ ಕಾನೂನು ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, ತರಬೇತಿಯ ಅವಧಿಯಲ್ಲಿ ಮಾಹೆಯಾನ ೪,೦೦೦ರೂ.ಗಳ ತರಬೇತಿ ಭತ್ಯೆಯನ್ನು ನೀಡಲಾಗುವುದು, ಅಭ್ಯರ್ಥಿಗಳ ವಾರ್ಷಿಕ ಕುಟುಂಬದ ಆದಾಯ ಪ್ರವರ್ಗ-೧ಕ್ಕೆ ರೂ.೩.೫೦ ಲಕ್ಷ ಹಾಗೂ ಪ್ರವರ್ಗ-೨ಎ, ೩ಎ, ೩ಬಿ ವರ್ಗಕ್ಕೆ ರೂ.೨.೫೦ ಲಕ್ಷಕ್ಕೆ ಮೀರಬಾರದು, ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದೆ ೨ ವರ್ಷದೊಳಗಾಗಿ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಪ್ರವರ್ಗ-೧ಕ್ಕೆ ವಯೋಮಿತಿಯಲ್ಲಿ ಸಡಲಿಕೆ ಇದ್ದು, ಉಳಿದ ಪ್ರವರ್ಗ-೨ಎ, ೩ಎ, ೩ಬಿ ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ೩೦ ವರ್ಷ ವಯೋಮಿತಿಯಲ್ಲಿರಬೇಕು, ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲೆಗಳು ಹಾಗೂ ೨-ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ೨೦೨೧ರ ಜುಲೈ ೩೧ ರಂದು ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯ ದೂರವಾಣ ಸಂಖ್ಯೆ; ೦೮೫೩೨-೨೩೧೭೧೦ಗೆ ಸಂಪರ್ಕಿಸುವAತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!