ಕಾನ್ಪುರದ ಕರೋಡ್‌ಪತಿಗಳ ಅಚ್ಚರಿಯ ಕಥೆ

ಕಾನ್ಪುರ: ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಕಾನ್ಪುರ ಒಮದು. ಸದ್ಯ ಅದು ಸುದ್ದಿಯಲ್ಲಿದೆ. ಅದೂ ಕೋಟ್ಯಾಧಿಪತಿಗಳಿಂದಾಗಿ !.
ಕಾನ್ಪುರದಲ್ಲಿ ಚಿಂದಿ ಆಯುವವರು, ರಸ್ತೆ ಬದಿ ಸಮೋಸ, ಪಕೋಡ ಮಾರುವವರು, ಸಾಧಾರಣ ಅಂಗಡಿಗಳನ್ನು ಇಟ್ಟುಕೊಂಡಿರುವವರ ಬಳಿಯೂ ಯಾರೂ ಊಹಿಸಲು ಸಾಧ್ಯವಾಗದಷ್ಟು ಆಸ್ತಿ-ಪಾಸ್ತಿ ಇರುವುದು ಪತ್ತೆಯಾಗಿದೆ. ಈ ನಗರವೊಂದರಲ್ಲಿಯೇ ಬರೋಬ್ಬರಿ 250ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಿದ್ದಾರಂತೆ. ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿ ಐಷಾರಾಮಿ ಬಂಗಲೆ, ದುಬಾರಿ ಕಾರುಗಳು, ಜಮೀನು, ಚಿನ್ನಾಭರಣ ಇರುವುದು ಪತ್ತೆಯಾಗಿದೆ.
ಆದಾಯ ಇಲಾಖೆ ನಡೆಸಿರುವ ತನಿಖೆಯಿಂದ ಕಾನ್ಪುರ್ ಕರೋಡ್ಪತಿಗಳ ಸ್ವರ್ಣ ಭಂಡಾರ ಬಯಲಾಗಿದೆ. ಅಧಿಕಾರಿಗಳ ತನಿಖೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವುದು ಗೊತ್ತಾಗಿದೆ. ಬೀದಿ ಬದಿ ತಿಂಡಿ, ಪಾನ್, ಸಿಗರೇಟ್, ಪೆಟ್ಟಿ ಅಂಗಡಿ ಇಟ್ಟುಕೊಂಡಿರುವ 256 ಮಂದಿ ಬಳಿ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಇದೆ. ಮುಖ್ಯವಾಗಿ ಈ ಪೈಕಿ ಯಾರೊಬ್ಬರೂ ತೆರಿಗೆ ಕಟ್ಟುತಿಲ್ಲ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಸಾಮಾನ್ಯ ಅಂಗಡಿ ವ್ಯಾಪಾರಿಗಳಂತೆ ಕಾಣಿಸಿಕೊಂಡಿರುವ ಇವರು ಸರ್ಕಾರಕ್ಕೆ ತೆರಿಗೆ ವಂಚನೆ ಎಸಗಿ ಭಾರೀ ಪ್ರಮಾಣದ ಆಸ್ತಿ ಮಾಡಿದ್ದಾರೆ. ಇನ್ನು ಕೆಲ ಜಾಣ ವ್ಯಾಪಾರಿಗಳು ತಮ್ಮ ಹೆಸರಲ್ಲಿ ಯಾವುದೇ ಆಸ್ತಿ ಮಾಡದೆ, ಕುಟುಂಬಸ್ಥರು-ಸAಬAಧಿಕರ ಹೆಸರಲ್ಲಿ ಆಸ್ತಿ ಮಾಡಿ ತೆರಿಗೆ ವಂಚಿಸಿದ್ದಾರೆ. ದಶಕಗಳಿಂದ ಟ್ಯಾಕ್ಸ್, ಕಟ್ಟದೆ ಆದಾಯ ಇಲಾಖೆ ಕಣ್ಣಿಗೆ ಮಣ್ಣೆರೆಚಿದ್ದಾರೆ.
ಟ್ಯಾಕ್ಸ್ ವಂಚಿಸಲೆAದೇ ಇಲ್ಲಿನ ಬೀದಿ ವ್ಯಾಪಾರಿಗಳು ಹಲವು ಕಳ್ಳ ದಾರಿಗಳನ್ನು ಹಿಡಿದಿರುವುದು ತನಿಖೆಯಿಂದ ಗೊತ್ತಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದದ್ದು ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಪರಿಶೀಲನೆಯಿಂದ ತಿಳಿದು ಬಂದಿದೆ. ತೆರಿಗೆ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ನೂರಾರು ಕೋಟಿ ತೆರಿಗೆ ಸಂಗ್ರಹಿಸಲು ಇಲಾಖೆ ಮುಂದಾಗಿದೆ.

Latest Indian news

Popular Stories

error: Content is protected !!