ಜನನಾಯಕ ಜನಾರ್ದನ ಭಂಡಾರ್ಕರ್ ಗೆ ನುಡಿನಮನ


ಉಡುಪಿ : ಜನಪರ ಕಾಳಜಿಯಿಂದ ಮಾನವೀಯ ಮೌಲ್ಯಗಳಿಗಾಗಿ ಮಿಡಿಯುತ್ತಿದ್ದ, ಸಂವಿಧಾನದ ಆಶಯಗಳ ಸಾಕಾರಕ್ಕಾಗಿ ದುಡಿಯುತ್ತಿದ್ದ ಕೆ.ಜನಾರ್ದನ ಭಂಡಾರ್ಕರ್ ಅವರ ಅಗಲುವಿಕೆಯ ಹಿನ್ನಲೆಯಲ್ಲಿ ಅವರ ಸೇವೆ – ಕನಸು ಮತ್ತು ಆಶಯಗಳ ನೆನಪಲ್ಲಿ ನುಡಿ ನಮನ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಡಿಸೆಂಬರ್,31 ರಂದು ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಸಲಾಯಿತು.


ಕಾರ್ಮಿಕ ನಾಯಕ ಬಾಲಕೃಷ್ಣ ಶೆಟ್ಟಿ, ದಲಿತ ಮುಖಂಡ ವಾಸು ನೇಜಾರು,ಕ್ರೈಸ್ತ ಸಂಘಟನೆಯ ಫ್ರೊ.ಸಿರಿಲ್ ಮಥಾಯಿಸ್, ಸೌಹಾರ್ದ ಚಳುವಳಿಯ ಡಾ.ಹಯವದನ ಉಪಾಧ್ಯ, ಪ್ರೊ.ಕೆ.ಫಣಿರಾಜ್ ಜಂಟಿಯಾಗಿ ಭಂಡಾರ್ಕರ್ ಅವರ ಭಾವಚಿತ್ರದ ಎದುರು ದೀಪ ಬೆಳಗಿಸುವ ಮೂಲಕ ನುಡಿ ನಮನಕ್ಕೆ ಚಾಲನೆ ನೀಡಿದರು.


ಆ ಬಳಿಕ ಭಂಡಾರ್ಕರ್ ಅವರ ಸೇವೆ ಆಶಯ ಮತ್ತು ಕನಸುಗಳ ಕುರಿತು ಬಾಲಕೃಷ್ಣ ಶೆಟ್ಟಿ, ಡಾ.ಹಯವದನ ಮೂಡು ಸಗ್ರಿ ಫ್ರೊ.ಸಿರಿಲ್ ಮಥಾಯಿಸ್, ವಾಸು ನೇಜಾರು, ಜಮಾತೆ ಇಸ್ಲಾಮಿ ಹಿಂದ್ ನ ಮಹಮ್ಮದ್ ಇದ್ರೀಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಮುಸ್ಲಿಮ್ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಲ್ಪೆ ಪ್ರೊ ಕೆ.ಫಣಿರಾಜ್ ಸ್ಮರಣೆ ಮಾಡಿ ನುಡಿ ನಮನ ಸಲ್ಲಿಸಿದರು.


ಭಂಡಾರ್ಕರ್ ಅವರು ಉಡುಪಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸ್ಥಾಪಕಾಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಚಾಲಕರಾಗಿ ನಡೆಸಿದ ಕಾರ್ಯ, ದಲಿತ ಮತ್ತು ಕಾರ್ಮಿಕ ಹಕ್ಕುಗಳ ಹೋರಾಟದಲ್ಲಿ ತೋರಿದ ಬದ್ಧತೆಗಳು, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ನಿರ್ವಹಿಸಿದ ಜವಬ್ದಾರಿ, ಇತ್ತೀಚೆಗೆ ತೀರಾ ಅಸೌಖ್ಯದಿಂದ ಆಸ್ಪತ್ರೆಯಲ್ಲಿದ್ದಾಗಲೂ ಬಸ್ ದರ ಏರಿಕೆ, ನರ್ಮ್ ಬಸ್ ಗಳ ಸ್ಥಳಾಂತರ, ವ್ಯಾಪಾರಿ ವರ್ಗಗಳಿಗೆ ಸರಕಾರದ ನಿಯಮಗಳಿಂದಾಗುತ್ತಿರುವ ತೊಂದರೆಗಳು, ಶಾಲಾ ವಿದ್ಯಾರ್ಥಿಗಳಿಗೆ ಸರಕಾರ ಮೊಟ್ಟೆ ವಿತರಿಸಲು ಮುಂದಾದಾಗ ಉಂಟಾದ ಪ್ರತಿರೋಧವನ್ನು ವಿರೋಧಿಸಿ ಬರೆದ ಪತ್ರ ಮುಂತಾದ ವಿಷಯಗಳನ್ನು ಸ್ಮರಿಸಲಾಯಿತು. ಭಂಡಾರ್ಕರ್ ಅವರ ಅಗಲುವಿಕೆಯಿಂದ ತುಂಬಲಾರದ ನಷ್ಟ ಆಗಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲಾ ಎನ್ನುವುದನ್ನು ಮಾತಾನಾಡಿದ ಪ್ರತಿಯೊಬ್ಬರೂ ಸ್ಮರಿಸಿಕೊಂಡರು.


ಈ ಕಾರ್ಯಕ್ರಮದಲ್ಲಿ ಎಪಿಸಿಆರ್ ನ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಸಾಲಿಡಾರಿಟಿ ಮೂವ್ ಮೆಂಟ್ ನ ಯಾಸೀನ್, ಎಸ್ ಐ ಒ ಜಿಲ್ಲಾ ಸಂಚಾಲಕ ಅಫ್ವಾನ್ ಮತ್ತಿತರರು ಉಪಸ್ಥಿತರಿದ್ಷರು.
ಡಿ.ಎಸ್.ಬೆಂಗ್ರೆ ಕಾರ್ಯಕ್ರಮ ಸಂಯೋಜಿಸಿ ಪ್ರಸ್ತಾವಿಕವಾಗಿ ಮಾತನಾಸಿದರು.

Latest Indian news

Popular Stories

error: Content is protected !!