ಬೆಳ್ತಂಗಡಿ: ಮಗುವಿನ ಸಹಿತ ಮಹಿಳೆ ನಾಪತ್ತೆ

ಬೆಳ್ತಂಗಡಿ: ತನ್ನ ಮೂವರು ಮುಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ ಮಹಿಳೆಯೋರ್ವಳು, ಬೆಳಿಗ್ಗೆ ತನ್ನ ಒಂದು ಮಗುವಿನ ಸಹಿತ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಪೆರಾಡಿ ಗ್ರಾಮದ ಆಯಿಷಾ ಮಂಜಿಲ್ ನಿವಾಸಿ ತಾಜುದ್ದೀನ್ ಶೇಖ್ ಅವರ ಪತ್ನಿ ಜುಬೈದಾ ಶೇಖ್ (34.ವ) ಹಾಗೂ ಪುತ್ರಿ ಆಯಿಸಾ ಅಸ್ಮಿಯಾ (7.ವ) ನಾಪತ್ತೆಯಾಗಿದ್ದವರು ಎನ್ನಲಾಗಿದೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ತಾಜುದ್ದೀನ್ ಶೇಖ್‌ರವರ ಪತ್ನಿ ಜುಬೈದಾ ಶೇಖ್‌ರವರು ತಮ್ಮ ಮೂವರು ಮಕ್ಕಳೊಂದಿಗೆ ವೇಣೂರಿನ ಪೆರಾಡಿ ಗ್ರಾಮದಲ್ಲಿ ವಾಸವಾಗಿದ್ದರು. ಡಿ. 18ರಂದು ರಾತ್ರಿ ಮೂವರು ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ ಜುಬೈದಾ ಶೇಖ್, ಮರುದಿನ ಬೆಳಿಗ್ಗೆ ತನ್ನ ಏಳು ವರ್ಷದ ಪುತ್ರಿ ಆಯಿಸಾ ಅಸ್ಮಿಯಾ ಜತೆ ನಾಪತ್ತೆಯಾಗಿರುವುದು ತಿಳಿದುಬಂದಿದೆ ಎನ್ನಲಾಗಿದೆ.

ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಮಹಿಳೆ ಹಾಗೂ ಬಾಲಕಿಯ ಪತ್ತೆಕಾರ್ಯ ನಡೆಯುತ್ತಿದೆ.

ಕಾಣೆಯಾಗಿರುವ ಮಹಿಳೆ 5.3 ಅಡಿ ಎತ್ತರವಿದ್ದು, ತುಳು, ಕನ್ನಡ, ಹಿಂದಿ, ಉರ್ದು ಭಾಷೆ ಬಲ್ಲವರಾಗಿದ್ದಾರೆ.

Latest Indian news

Popular Stories

error: Content is protected !!